ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆ


 ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆ


ಬಿ.ಜೆ.ಪಿ.ಕೇಂದ್ರ ಕಛೇರಿ ಜಗನ್ನಾಥ ಭವನದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಮುನಿರಾಜು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಕೀಲಾ ಮುನಿರಾಜುರವರು ಹಾಗೂ ಯವ ನಾಯಕ ಸಂಜಯರವರು ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರೂಂದಿಗೆ ಆಗಮಿಸಿದರು .ಬಿ.ಜೆ.ಪಿ.ಕೇಂದ್ರ ಕಛೇರಿಯಲ್ಲಿ ಬಿ.ಜೆ.ಪಿ.ರಾಷ್ಟೀಯ ಪ್ರಧಾನ ಕಾರ್ಯದರ್ಶಿ,ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ,ಮಾಜಿ ಸಚಿವರು,ಶಾಸಕರಾದ ಸುರೇಶ್ ಕುಮಾರ್ ,ವಿಧಾನಪರಿಷತ್ತು ಹುಲಿ ನಾಯ್ಕರ್ ,ಮಾಜಿ ಉಪಮಹಾಪೌರರಾದ ರಂಗಣ್ಣ ,ರಾಜ್ಯ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರವೀಂದ್ರನ್ ಮತ್ತು ರಾಜಾಜಿನಗರ ಬಿ.ಜೆ.ಪಿ.ಮಂಡಲದ ಉಪಾಧ್ಯಕ್ಷರಾದ ಶ್ರೀನಿವಾಸ್ ,ಶ್ರೀರಾಮ ಮಂದಿರ ವಾರ್ಡ ಅಧ್ಯಕ್ಷರಾದ ಭಗವಾನ್ ಸತೀಶ್ ಹಾಗೂ ಅಲ್ಪಸಂಖ್ಯಾತ ವಿಭಾಗದ ಮುಖಂಡರಾದ ಮುನ್ನ ಭಾಯಿರವರು ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತ ಕೋರಿದರು .ತದನಂತರ ಮಾತನಾಡಿದ ಬಿ.ಜೆ.ಪಿ.ರಾಷ್ಟೀಯ ಪ್ರಧಾನ ಕಾರ್ಯದರ್ಶಿ ,ರಾಜ್ಯ ಉಸ್ತುವಾರಿಯಾಗಿರುವ ಮುರುಳಿಧರ್ ರಾವ್ ರವರು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ಮಾತ್ರ ದೇವಸ್ಥಾನ ನೆನಪು ಆಗುತ್ತದೆ.ಬೆಂಗಳೂರು ನಗರ ಜನರು ಬಹಳ ಎಚ್ಚರದಿಂದ ಇರಬೇಕು ,ಬೆಂಕಿ ಆರಿಸಲು ನೀರು ಹಾಕುತ್ತಾರೆ ಅದರೆ ಕಾಂಗ್ರೆಸ್ ಪಕ್ಷದವರು ನೀರಿಗೆ ಬೆಂಕಿ ಹಾಕುತ್ತಾರೆ ,ಬೆಳಂದೂರು ಕೆರೆ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ .ಬಿ.ಎಸ್.ಯಡಿಯೂರಪ್ಪರವರು ರಾತ್ರಿ ಸ್ಲಂ ನಲ್ಲಿ ವಾಸ ಮಾಡಿ ಅಲ್ಲೆ ರಾತ್ರಿ ಇದ್ದು ಅವರ ಕಷ್ಟಗಳು ಕೇಳಿದರು ,ದಲಿತರ ಮನೆಗಳಲ್ಲಿ 65ದಿನಗಳ ವಾಸ್ತವ್ಯ ಮಾಡಿ ,ಉಪಹಾರ ಸೇವನೆ ಮಾಡಿದರು .ಅದರೆ ಕಾಂಗ್ರೆಸ್ ನವರು ಸುಳ್ಳು ಎಂದು ಹೇಳುತ್ತಾರೆ .ಬಿ.ಜೆ.ಪಿ.ಕಾರ್ಯಕರ್ತ ಸಂತೋಷ ಕೊಲೆಯಾಯಿತು ,ಕೊಲೆ ಮಾಡಿದ ವ್ಯಕ್ತಿ ಆಸ್ಲಮ್ ಗಾಂಜಾ ಕಿಂಗ್ ಅವನ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ನಿಂತಿದೆ .ಮರಳು ಮಾಫಿಯಾ ,ಭೂ ಮಾಫಿಯ ದಿಂದ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ