ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ - ಕೆ.ಮುಕುಡಪ್ಪ

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ - ಕೆ.ಮುಕುಡಪ್ಪ



ಭಾರತೀಯ ಯುವಕರೇ!
ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ ನಿಷ್ಠುರವಾಗಿರುವ,ಪ್ರಚಾರಕ್ಕೆ ಬರದೆ ಹುದುಗಿ ಹೋಗಿರುವ ಸೂಕ್ಷ್ಮ ವಿಷಯಗಳನ್ನು ಗಮನಿಸಿ. ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಬುದ್ಧ ಎಲ್ಲಾ ಮನು ಕುಲಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಶ್ರಮಿಸಿದ ,ಇಲ್ಲಿಯೇ ಹುಟ್ಟಿ ,ಬೆಳೆದ ಬೌದ್ಧ ಧರ್ಮ ಶೂದ್ರ (ಬಹುಜನ)ರನ್ನು ಉದ್ಧಾರ ಮಾಡುವುದು ಸಹಿಸದ ಪುರೋಹಿತರು   ಆ ಧರ್ಮವನ್ನು ತಮ್ಮ ಕುಟಿಲ ಕಾರಸ್ಥಾನದಿಂದ ಈದೇಶದಿಂದಲೇ ಓಡಿಸಿದರು ; ಹನ್ನೆರಡನೆಯ ಶತಮಾನದಲ್ಲಿ ಬಸವೇಶ್ವರನು, ಅಸಮಾನತೆ ಬಿತ್ತಿದ ಈ ವೈದಿಕ ಧರ್ಮದ ವಿರುದ್ಧ ಹೋರಾಡಿ ಸಮಾನತೆಯ ಶೈವ ಧರ್ಮವನ್ನು ತರಲು ಯತ್ನಿಸಿದರು, ಆಗಲೂ ಈ ಪುರೋಹಿತರು ,ಜನಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಬಸವಣ್ಣನನ್ನು ,ಆತನ ಅನುಯಾಯಿಗಳನ್ನು ವಾಮಮಾರ್ಗದಿಂದ ಕೊಲೆಗೈದರು; ಶೂದ್ರರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ  ಜ್ಯೋತಿ ಬಾಫುಲೆ ಸಾವಿತ್ರಿ ಬಾಯಿಫುಲೆ, ಶೂದ್ರರಿಗೆ ಶಸ್ತ್ರ ,ಶಾಸ್ತ್ರ ನೀಡದ ಪುರೋಹಿತರನ್ನು ತರಾಟಗೆ ತೆಗೆದುಕೊಂಡು ಬುದ್ದಿ ಹೇಳಿದ ಪ್ರಪಂಚದ ಏಕೈಕ ನಿಜವಾದ ಸಂನ್ಯಾಸಿ
   ಸ್ವಾಮಿ ವಿವೇಕಾನಂದರು ; ಇಡೀ ಭಾರತ ದೇಶದಲ್ಲಿ ,೧೯೦೫ ರಲ್ಲಿಯೇ ಶೂದ್ರರಿಗೆ ಶೈಕ್ಷಣಿಕ ಮೀಸಲಾತಿಯನ್ನು ನೀಡಿ ಉದ್ಧಾರಕ್ಕಾಗಿ ಶ್ರಮಿಸಿದ ಆಗಿನ ಕೊಲ್ಹಾಪುರ ಸಂಸ್ಥಾನದ ರಾಜ ಷಾಹು ಮಹಾರಾಜರನ್ನು ;  ಷಾಹುಮಹಾರಾಜ ರಿಂದ ಪ್ರಭಾವಿತರಾಗಿ, ೧೯೨೧ ರಲ್ಲಿ ,
ಆಗಿನ ಮೈಸೂರು ಸಂಸ್ಥಾನದಲ್ಲಿ ,ಶೂದ್ರರಿಗೆ ಮೀಸಲಾತಿ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಗತ್‌‌ಸಿಂಗ್ ,ವಲ್ಲಭ ಭಾಯಿ ಪಟೇಲ್, ಸುಭಾಷ್ ಚಂದ್ರಬೋಸ್, ಅಂಬೇಡ್ಕರ್ ಮುಂತಾದ ವರನ್ನು ಪುರೋಹಿತ ವರ್ಗ ಕಡೆಗಣಿಸಿ ,ತಮ್ಮ ವರ್ಗಕ್ಕೆ ಸೇರಿದ ಎರಡನೇ ದರ್ಜೆಯ ನಾಯಕರಾದ ,ತಮ್ಮವರ್ಗಕ್ಕೆ ಸೇರಿದ ಗಾಂಧಿ, ನೆಹರುರಂತಹ ಸ್ವಾರ್ಥಿಗಳಿಗೆ ಹೆಚ್ಚಿನ ಪ್ರಚಾರ ,ಪ್ರಾಶಸ್ತ್ಯ ನೀಡಿ ,ಈ ದೇಶ ವಿಭಜನೆಗೆ ಕಾರಣರಾಗಿ ಶೂದ್ರರು ಪ್ರಧಾನಿಯಾಗದಂತೆ ಷಡ್ಯಂತ್ರ ಮಾಡಿದ ಕುತಂತ್ರ ಈಗಲೂ ನಮಗೆ ಗೊತ್ತಿಲ್ಲ.ಉತ್ತರ ಪ್ರದೇಶದಲ್ಲಿ ದಲಿತರಿಗೆ ೧೯೫೪ ರಲ್ಲಿಯೇ,ಅಂದು ಮುಖ್ಯ ಮಂತ್ರಿಯಾಗಿದ್ದ ಚರಣ್ ಸಿಂಗ್, "ಉಳುವವನೇ ಭೂಮಿ ಒಡೆಯ" ಕಾನೂನು ಜಾರಿಗೊಳಿಸಿ ಪುರೋಹಿತರ ಕೆಂಗಣ್ಣಿಗೆ ಗುರಿಯಾಗಿ ,ಇಡೀ ದೇಶದ ನಾಯಕನಾಗಿ ಮೆರೆಯಬೇಕಾದ ಮಹಾನ್ ಚೇತನಕ್ಕೆ ಜಾತಿಲೇಪನ ಹಚ್ಚಿ ಅವರನ್ನು ಪುರೋಹಿತರು ಮುಗಿಸಿದರು.
  ಕಾಶ್ಮೀರದ ರಾಜ ಹರೀಸಿಂಗ್ ತನ್ನ ಜಾತಿ ಯವನೆಂಬ ಕಾರಣದಿಂದಲೇ ಕಾಶ್ಮೀರ ವನ್ನು ಸ್ವತಂತ್ರ ದೇಶವನ್ನಾಗಿಸಲು ಒಳಗೊಳಗೇ ಕುತಂತ್ರ ಮಾಡಿದ ನೆಹರು, ಜಾತಿವಾಗಿದ್ದರೂ ಸಹ, ನೆಹರು ಇಡೀ ದೇಶದ ಸಮಾಜವಾದಿ ನಾಯಕನಾಗಿ ಮೆರೆಯಲು ಪುರೋಹಿತ ವರ್ಗ ಅಹರ್ನಿಶಿ ಶ್ರಮಿಸುತ್ತದೆ. ಎಲ್ಲರಿಗೂ ಒಂದೇ ಮತ,ಒಂದೇಮೌಲ್ಯ ,ನೀಡಿ ರಾಜಕೀಯ ಸಮಾನತೆಯನ್ನು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಲ್ಲದೆ, ಶೂದ್ರ ಜಾತಿಗಳಾದ ಲಿಂಗಾಯತ, ಒಕ್ಕಲಿಗ, ಕುರುಬ, ಇತ್ಯಾದಿ ಸಾವಿರಾರು ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ೧೫(೪) ಮತ್ತು ೧೬(೪) ಅಡಿಯಲ್ಲಿ ಮೀಸಲಾತಿ ನೀಡಿದ್ದನ್ನು ಪುರೋಹಿತ ವರ್ಗ ಸುಪ್ರೀಂಕೋರ್ಟ್ ಹೋಗಿ ರದ್ದುಗೊಳಿಸಿದ್ದನ್ನು ,ಬಾಬಾ ಸಾಹೇಬ ಅಂಬೇಡ್ಕರ್ ಖಂಡಿಸಿ ,ಮತ್ತೆ ಸಂವಿಧಾನದಲ್ಲಿ ಮೊದಲನೆಯ ತಿದ್ದುಪಡಿ ಮಾಡಿ ಈ ಬಹುಜನರಿಗೆ ಮೀಸಲಾತಿಯನ್ನು ನೀಡಿ ಎಲ್ಲಾ ವರ್ಗದ ನಾಯಕ ನಾಗದೆ ಬರೀ "ದಲಿತನಾಯಕ"ನೆಂದು ನಾಮಕರಣ ಮಾಡಿದ್ದು ಈ ಪುರೋಹಿತರು; ೧೯೪೬ ರಿಂದ ೧೯೫೧ ರವರೆಗೆ ಎಲ್ಲಾಮಹಿಳೆಯರಿಗೆ , ಅದರಲ್ಲೂ ಪುರೋಹಿತರ ಮಹಿಳೆಯರೂ ಸೇರಿ, " ಹಿಂದೂ ಕೋಡ್ " ಮಸೂದೆಯನ್ನು ತಂದಿದ್ದನ್ನು ,ಪ್ರಧಾನಿ ನೆಹರೂ ತಿರಸ್ಕರಿಸಿದ್ದನ್ನು ವಿರೋಧಿಸಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸಂಪುಟದಿಂದ ,ಅಂಬೇಡ್ಕರ್ ಹೊರಗೆ ಬರುತ್ತಾರೆ." ಹಿಂದೂ ಕೋಡ್ ಮಸೂದೆ" ಯಿಂದ ಮಹಿಳೆಯರು ತಮ್ಮ ತಂದೆಯ ಆಸ್ತಿ ಯಲ್ಲಿ ಮಗನಷ್ಟೇ ಸಮಪಾಲು,ಮಕ್ಕಳಿಲ್ಲದಿದ್ದರೆ ದತ್ತು ಸ್ವೀಕಾರ ಮಾಡುವ ,ಶಿಕ್ಷಣ ಪಡೆಯಲು  ಹಕ್ಕು ಮುಂತಾದ ಅನೇಕ ಸವಲತ್ತುಗಳನ್ನು ನೀಡಲಾಗಿತ್ತು.

ಸಾರಾಂಶ ಇಷ್ಟು :

ಶೂದ್ರರನ್ನು ಹೋರಾಟಕ್ಕೆ ಬಳಸಿಕೊಂಡು ಪುರೋಹಿತಶಾಹಿ ತಮ್ಮದೇ ಜಾತಿಯ ಕಡೆಯ ದರ್ಜೆಯ ವ್ಯಕ್ತಿಗಳು ಅಧಿಕಾರ ವಹಿಸಿಕೊಳ್ಳುವ ಷಡ್ಯಂತ್ರ,ಕುತಂತ್ರ ಮಾಡುತ್ತಾರೆ; ಮೊದಲಿನಿಂದಲೂ ಕಾಂಗ್ರೆಸ್ ಇದನ್ನೇ ಮಾಡತ್ತಾ ಬಂದಿದೆ ; ಬಿ ಜೆ ಪಿ ಹೇಳಿ ಕೇಳಿ ಪುರೋಹಿತರ ಪಕ್ಷ ಅಥವಾ ಪುರೋಹಿತರ ಮಾರ್ಗದರ್ಶನದಂತೆ ನಡೆಯುವ ಪಕ್ಷ .
                 
                                    -ಕೆ.ಮುಕುಡಪ್ಪ ,ಅಧ್ಯಕ್ಷ ಅಹಿಂದ

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ