ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

 
      ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನ ಟೋನಲ್ ಮುಂಭಾಗದ ರಾಣಿ ಚನ್ನಮ್ಮ  ಪ್ರತಿಮೆ  ಮುಂಬಗ ಪ್ರತಿಭಟನೆ ಮಾಡಲಾಯಿತು.
ನಂತರ ಮಾತನಾಡಿದ ಪಾರ್ಟಿಯ ರಾಜ್ಯಾಧ್ಯಕ್ಷ   ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.  
  ಮಹದಾಯಿ ಬೇಡಿಕೆಯನ್ನು ತನ್ನ ರಾಜಕೀಯ ತಂತ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕರ್ನಾಟಕದ ಯಾವುದೇ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ, ಬರ ಪೀಡಿತ ಪ್ರದೇಶ ರೈತರಿಗೆ ಸಾಲ ಮನ್ನಾ, ಬೆಳೆ ಪರಿಹಾರ ಇನ್ನಿತರ ವಿಷಯಗಳಲ್ಲಿ ನಿರ್ಲಕ್ಷ್ಯ ಮಾಡಿದೆ, ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ, ಜಲ ನೀತಿ ಜಾರಿಗೆ ತರಬೇಕು, ಲೋಕಪಾಲ್ ಮಸೂದೆ ಎಲ್ಲ ರಾಜ್ಯಗಳಲ್ಲಿ ಜಾರಿ ಆಗಬೇಕು, 
ಡಿಜಿಟಲ್ ಇಂಡಿಯಾ ಸೋತಿದೆ ಬಡಜನರಿಗೆ ತಲುಪಿಲ್ಲ, ಸ್ವಚ್ಛತಾ ಅಭಿಯಾನ ವಿಫಲವಾಗಿದೆ, ಜಿಎಸ್ಟಿಯಿಂದ ಜನಸಾಮಾನ್ಯರಿಗೆ ನಿತ್ಯ ಜೀವನಕ್ಕೆ  ವಾರೆಯಾಗಿದೆ,
ಜನ್ ಧನ್ ಯೋಜನೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಬಾಂಗ್ಲಾದೇಶದಿಂದ ಸುಮಾರು ಇಪ್ಪತ್ತು ಲಕ್ಷ ವಲಸಿಗರನ್ನು ಅವರ ದೇಶಕ್ಕೆ ವಾಪಸ್ಸು ಕಳಿಸುವ ಆದೇಶ ವಾಗಬೇಕು ಎಂದು ಆಗ್ರಹಿಸಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ