ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ

ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ 

ಎ.ಐ.ಸಿ.ಸಿ.ಅಧ್ಯಕ್ಷರಾಗಿ ನೂತನವಾಗಿ ನೇಮಕರಾದ ಶ್ರೀಯುತ ರಾಹುಲ್ ಗಾಂಧೀಜಿರವರು ಕರ್ನಾಟಕ ಆಗಮಿಸುತ್ತಿರುವ ಶುಭಾ ಸಂದರ್ಭದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ ಕಾರ್ಯಕ್ರಮವನ್ನು ಮೌರ್ಯ ವೃತ್ತ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಸಮಾರಂಭದಲ್ಲಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಬೆಂಗಳೂರು ನಗರ ಕೇಂದ್ರ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್ ,ಕೆ.ಪಿ.ಸಿ.ಸಿ.ವಕ್ತಾರರಾದ ಸಲೀಮ್ ಮತ್ತು ಕಾಂಗ್ರೆಸ್ ಮುಖಂಡರಾದ ಶೇಖರ್ ,ಹೇಮರಾಜು ,ಆನಂದ್ ,ಅದಿತ್ಯ ಮಹಿಳಾ ಕಾಂಗ್ರೆಸ್ ಆಶಾ ,ಶಾರದ ,ಆಶಾರಾಜು ಮತ್ತು ಯುವ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು .ಸಿಹಿ ಲಾಡು ವಿತರಣೆ ಮಾಡಿ ಮಾತನಾಡಿದ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ರವರು ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಭಷ್ಟಚಾರ ರಹಿತ ,ಪಾರದರ್ಶಕ ಆಡಳಿತ ನಡೆಸುತ್ತಿದೆ .ಸರ್ವರಿಗೂ ಸಮಪಾಲು ,ಸರ್ವರಿಗೂ ಸಮಬಾಳು ಎಂಬ ಸಿದ್ದಾಂತದಂತೆ ಅನ್ನಭಾಗ್ಯ ,ವಿದ್ಯಾಸಿರಿ ,ಇಂದಿರಾ ಕ್ಯಾಂಟೀನ್ ,ರೈತರಿಗೆ ಸಾಲ ಮನ್ನ 165ಭರವಸೆಗಳಲ್ಲಿ 160ಭರವಸೆ ಈಡೇರಿಸಿದ ಭಾರತದ ಮೊಟ್ಟ ಮೊದಲ ಸರ್ಕಾರ ಅದುವೇ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ .ಕರ್ನಾಟಕ ರಾಜ್ಯಕ್ಕೆ ಎ.ಐ.ಸಿ.ಸಿ.ಅಧ್ಯಕ್ಷರಾದ ಶ್ರೀಯುತ ರಾಹುಲ್ ಗಾಂಧೀಜಿ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವೆ ಬಂದಿದೆ .ಗುಜರಾತ್ ಮತ್ತು ರಾಜಸ್ಥಾನದಲ್ಲಿ ರಾಹುಲ್ ಗಾಂಧಿಜೀರವರ ಪ್ರಭಾವದಿಂದ ಜಯಭೇರಿ ಬಾರಿಸಿತು .ಇದೀಗ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ .ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿರವರು ಭಾರತದ ಜನತೆಗೆ ನೀಡಿದ ಭರವಸೆಗಳನ್ನು ಯಾವುದೇ ಜಾರಿಗೆ ತರದೆ ಸುಳ್ಳು ಹೇಳಿ ,ಜನಗಳಿಗೆ ಮಂಕುಬೂದಿ ಎರಚ್ಚಿದ್ದಾರೆ .ನಿರುದ್ಯೋಗ ಯುವಕ,ಯುವತಿಯರಿಗೆ 2ಕೋಟಿ ಉದ್ಯೋಗ ಎಲ್ಲಿ ಹೋಯಿತು ,ಬಡವರ ಜನಧನ್ ಖಾತೆಗೆ 15ಲಕ್ಷ ಇರಲಿ 15ಪೈಸ ಬಂದಿಲ್ಲ ,ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ .ಇನ್ನು ರಾಜ್ಯ ಬಿ ಜೆ.ಪಿ.ನಾಯಕರು ಹಗರಣದ ರೂವಾರಿಗಳು ,ಅವರ ನಡುವೆ ಕಿತ್ತಾಟ ಸರಿಪಡಿಸಲು ಅಗುತ್ತಿಲ್ಲ .ಇನ್ನ ರಾಜ್ಯದ ಜನತೆಗೆ ಯಾವ ರೀತಿಯಲ್ಲಿ ಅಧಿಕಾರ ನಡೆಸುತ್ತಾರೆ .ಇವರ ಆಟೋಟೋಪಗಳು ರಾಜ್ಯದ ಜನ ನೋಡಿದ್ದಾರೆ .ಕೋಮುವಾದಿಗಳು ,ಜಾತಿವಾದಿಗಳಾದ ಬಿ.ಜೆ.ಪಿ ಪಕ್ಷದ ವಿರುದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ