"ನಮ್ಮ ಬೆಂಗಳೂರು ನಮ್ಮ ಹೆಮ್ಮ"

"ನಮ್ಮ ಬೆಂಗಳೂರು ನಮ್ಮ ಹೆಮ್ಮ"


ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ "ನಮ್ಮ ಬೆಂಗಳೂರು ನಮ್ಮ ಹೆಮ್ಮ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಹತ್ ಪಾದಯಾತ್ರೆ ಹಾಗೂ ಸಮಾವೇಶವನ್ನು ಕೆ.ಪಿ.ಸಿ.ಸಿ.ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್, ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣ ,ವಿಧಾನಪರಿಷತ್ತು ಸದಸ್ಯರಾದ ನಾರಾಯಣಸ್ವಾಮಿ ಮತ್ತು ಮಾಜಿ ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ ,ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ,ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ,ಮಾಜಿ ವಿಧಾನಪರಿಷತ್ತು ಸದಸ್ಯರಾದ ಎಂ.ಡಿ ಲಕ್ಷ್ಮೀನಾರಾಯಣ ಹಾಗೂ ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್ ಹಾಗೂ ಮಹಿಳಾ ಅಭಿವೃದ್ದಿ ನಿಗಮ ಅಧ್ಯಕ್ಷರಾದ ಭಾರತಿ ಶಂಕರ್ ,ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಲಕ್ಷ್ಮೀಕಾಂತ್ ,ವಿ.ಎಸ್.ಆರಾಧ್ಯ.ಎಂ.ಎ.ಆನಂದ್, ಗಿರೀಶ್. ಕೆ.ನಾಶಿ.ಶ್ರೀಮತಿ ಮಂಜುಳಾ ಪುರುಷೋತ್ತಮ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬೃಹತ್ ಪಾದಯಾತ್ರೆಯ ಮೂಲಕ ಕುರುಬರಹಳ್ಳಿ ವೃತ್ತದ ಡಾ||ರಾಜ್ ಕುಮಾರ್ ಪ್ರತಿಮೆ ಬಳಿ ಸಮಾವೇಶದಲ್ಲಿ ಭಾಗವಹಿಸಲು 10000ಕಾಂಗ್ರೆಸ್ ಕಾರ್ಯಕರ್ತರೂಂದಿಗೆ ವೇದಿಕೆ ಸ್ಥಳಕ್ಕೆ ಆಗಮಿಸಿದರು.
ತದನಂತರ ಪ್ರಾಸ್ತವಿಕ ಭಾಷಣವನ್ನು ಎಂ.ಶಿವರಾಜುರವರು ಮಾತನಾಡಿದರು, ಸ್ವಾಗತವನ್ನು ಕೇಶವಮೂರ್ತಿರವರು ಕೋರಿದರು.ಉದ್ಘಾಟನೆ ಮಾಡಿ ಮಾತನಾಡಿದ ಕೆ.ಪಿ.ಸಿ.ಸಿ.ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್ ರವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರದ 165ಭರವಸೆಗಳಲ್ಲಿ 158ಭರವಸೆಗಳನ್ನು ಈಡೇರಿಸಲಾಗಿದೆ .ನಮ್ಮದು ನುಡಿದಂತೆ ನಡೆದ ಸರ್ಕಾರ. .ಹಿಂದಿನ ಬಿ.ಜೆ.ಪಿ.ಸರ್ಕಾರದ ವೈಫಲ್ಯಗಳು ತಿಳಿಸಿದರು.ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣರವರು ಮಾತನಾಡಿದ ಹಿಂದಿನ ಸರ್ಕಾರದಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿ ಇತ್ತು ಈಗ ಮುಖ್ಯಮಂತ್ರಿ  ಸಿದ್ದರಾಮಯ್ಯ  ಸರ್ಕಾರದ ಆಡಳಿತದಲ್ಲಿ ನಂಬರ್ ಒಂದು ಸ್ಥಾನದಲ್ಲಿ ಇದೆ. ಬಿ.ಜೆ.ಪಿ.ರಾಷ್ಟಧ್ಯಕ್ಷರಾದ ಅಮೀತ್ ಷಾ ರವರು ಕರ್ನಾಟಕಕ್ಕೆ ಬಂದಾಗ ವ್ಯಾಪಾರ ಮಾಡಲು ಬಂದಿರುವುದಾಗಿ ಎಂದು ಹೇಳಿದರು, ಕರ್ನಾಟಕದ ಜನ ವ್ಯಾಪಾರಕ್ಕೆ ಇಲ್ಲ ಎಂದು ಅರಿತುಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿ ಅಮೀತ್ ಷಾ ರವರ ಯಾರು ಭಷ್ಟಚಾರಿಗಳು ಅವರೆ ಹೇಳಿದ್ದಾರೆ ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಏನು ಎಂಬುದು ಜನಸಾಗರ ನೋಡಿ ಅರಿವು ಮಾಡಿಕೊಳ್ಳಿ .ಕಾಂಗ್ರೆಸ್ ಪಕ್ಷದಿಂದ ಹೊರ ಹೋದವರು 45ದಿನ ನಂತರ ಪಶ್ಶಾತಾಪ ಪಾಡಲಿದ್ದಾರೆ ಎಂದು ಹೇಳಿದರು.
ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದ ನೂರಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ