ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!

ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!


  ಹೌದು ಸ್ನೇಹಿತರೇ, 2018ರ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಅದರ ಬೆನ್ನಲ್ಲೇ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಈ ಭಾರಿಯ ನೀತಿ ಸಂಹಿತೆಯು ಸಾಮಾಜೀಕ ಜಾಲತಾಣವನ್ನು ಬಿಟ್ಟಿಲ್ಲಾ . ಮುಖ್ಯವಾಗಿ ಫೇಸ್ ಬುಕ್ , ಟ್ವಿಟರ್ , ವಾಟ್ಸ್ ಪ್ , ಇನ್ಸ್ಟಗ್ರಾಮ್ , ಇನ್ನೂ ಮುಂತಾದ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಚಾರವನ್ನು ಸಹ ನಿಷೇದಿಸಿದೆ. ಮುಂದುವರೆದು ಅಭ್ಯಾರ್ಥಿಯ ಪರ ಪೊಸ್ಟರ್ ಗಳನ್ನು ಹಾಕುವುದಾಗಲಿ ಅಥವಾ ಅಭ್ಯಾರ್ಥಿಯ ಪರವಾಗಿ ಪ್ರಚಾರ ಮಾಡುವುದಾಗಲಿ. ಇತರ ಪಕ್ಷದ ಅಭ್ಯಾರ್ಥಿಗಳನ್ನು ನಿಂದೀಸುವುದಾಗಲಿ ಮಾಡಬಾರದು ಎಂದು ಹೇಳಿದೆ. 2014ರ ಲೋಕಸಭೆ ಚುನಾವಣೆಯು ಮುಖ್ಯವಾಗಿ ಸಾಮಾಜೀಕ ಜಾಲತಾಣವನ್ನು ಅವಲಂಬಿಸಿತ್ತು ಅದರ ಸಧುಪಯೋಗವನ್ನು ಈ ಚುನಾವಣೆಯಲ್ಲಿ ಪಡೆಯಲು ವಿವಿದ ಪಕ್ಷಗಳು ತಮ್ಮ ಪಕ್ಷದ ಕಚೇರಿಯಲ್ಲೇ ಐಟಿ ಡಿಪಾರ್ಟ್ ಮೆಂಟ್ ತೆಗೆದು ಸಾಮಾಜೀಕ ಜಾಲತಾಣದ ಸಮರಕ್ಕೇ ಸಿದ್ದವಾಗಿದ್ದವು. ಆದರೇ ಕೇಂದ್ರ ಚುನಾವಣಾ ಆಯುಕ್ತರ ಈ ನಿರ್ದಾರ ವಿವಿದ ರಾಜಕೀಯ ಪಕ್ಷಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ .

      ನೀವು ಕೂಡ ಅಷ್ಟೇ, ನಿಮ್ಮ ಫೇಸ್ ಬುಕ್ ಖಾತೆಗೆ ವಿವಿದ ಪಕ್ಷದ ಮುಖಂಡರ ಪರ ಬ್ಯಾಟ್ ಮಾಡುವಾಗ ಹುಷಾರಾಗಿರಿ. ಇತರ ಪಕ್ಷದ ಮುಖಂಡರನ್ನು ನಿಂದೀಸುವ ಮುಂಚೆ ಯೋಚಿಸಿ. ನೀವು ಕಮೆಂಟ್ ಮಾಡಿದ ಅಥವಾ ಅಪ್ ಲೋಡ್ ಮಾಡಿದ ಫೂಟೇಜ್  ಸ್ಕ್ರೀನ್ ಶಾಟ್ ತೆಗೆದು, ತಾಲೂಕಿನ ಅಥವಾ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಕಳಿಸಿದರೇ ನಿಮ್ಮ ಕಥೆ ಮುಗಿದ ಹಾಗೆ.  ನಿಮಗೆ ಬೇಲು ಸಿಗಲ್ಲಾ , ಪಾನಿಪೂರಿಯೂ ಸಿಗಲ್ಲಾ ..! 

 ಇವತ್ತಿನಿಂದ ಯಾರನ್ನು ಬೆಂಬಲಿಸಿ ಸಾಮಾಜೀಕ ಜಾಲತಾಣಗಳಲ್ಲಿ ಕುಸ್ತಿ ಮಾಡಲು ಹೋಗಬೇಡಿ. ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ತಂದುಕೊಳ್ಳಬೇಡಿ .

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ