ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ


ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ


  ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಾಗಪುರ ಡಾ||ರಾಜ್ ಕುಮಾರ್ ಸಂಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಹತ್ತು ಮಹಿಳೆಯರಿಗೆ "ಸ್ಪಂದನ ಸ್ತ್ರೀ" ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟನೆಯನ್ನು ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣರವರು ಮತ್ತು ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ಮತ್ತು ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ವಿಶಾಲಾಕ್ಷೀ ಎಂ.ಶಿವರಾಜು ಮತ್ತು ಸಾಲು ಮರದ ತಿಮ್ಮಕ್ಕರವರು ಉದ್ಘಾಟನೆ ನೇರವೆರಿಸಿದರು. ತದನಂತರ ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ವಿಶ್ವದ ಎಲ್ಲ ರಾಷ್ಟಗಳಲ್ಲಿ ಅಚರಿಸಲಾಗುತ್ತಿದೆ. ಸ್ವಾತಂತ್ಯ್ರ ಪೂರ್ವದಲ್ಲಿ ಭಾರತದಲ್ಲಿ ಮಹಿಳೆಯರು ಆವಿದ್ಯಾವಂತರಾಗಿದ್ದರು ಅದರೆ ಇಂದು ಮಹಿಳೆಯರು ವಿದ್ಯಾವಂತರಾಗಿ ಪುರುಷರಿಗೆ ಸರಿಸಮಾನವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿರವರು ವಿಶ್ವವೆ ಮೆಚ್ಚಿದ ನಾಯಕಿಯಾಗಿದ್ದರು ,ಶ್ರೀಲಂಕಾ ಪ್ರಧಾನಿ ಬಂಡಾರೆ ಸಿರಿಮಾಮೋ ಮತ್ತು ಬೇನಜೀರ್ ಭುಟ್ಟೋ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರತೃಪ್ರಭ ಮತ್ತು ಪೋಲೀಸ್ ಮಹಾ ನಿರ್ದಶಕರಾದ ನೀಲಮಣಿರಾಜು ರವರು ಮಹಿಳಾ ಲೋಕದಲ್ಲಿ ಸಾಧನೆ ಮಾಡಿದವರು .ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು. ನಂತರ ಮಾತನಾಡಿದ ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣರವರು ಇತ್ತೀಚೆಗೆ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಲು ಪತಿ ಹಾಗೂ ತಂದೆಯವರು ಸಹಕಾರವಿದೆ. ಮಹಿಳೆಯರನ್ನು ಉತ್ತಮ ರೀತಿಯಲ್ಲಿ ನೋಡಬೇಕು.ಸಾರಿಗೆ ಸಚಿವರಾಗಿ ನಾನು ಮಹಿಳೆಯರಿಗೆ ಬಸ್ಸುಗಳಲ್ಲಿ ಪ್ರತೇಕ ಸೀಟುಗಳಲ್ಲಿ ಪಿಂಕ್ ಸೀಟುಗಳನ್ನು ಮೀಸಲು ಇಡಲಾಗಿದೆ. ಇಂದಿರಾಗಾಂಧಿರವರನ್ನು ಹಿರಿಯ ರಾಜಕಾರಣಿ ಆಟಲ್ ಬಿಹಾರಿ ವಾಜಪೇಯಿರವರು ದಿಟ್ಟ ಮಹಿಳೆ ಎಂದು ಪ್ರಶಂಸೆ ಮಾಡಿದ್ದರು. ರಾಜಕೀಯದಲ್ಲಿ ಮಹಿಳಾ ರಾಜಕಾರಣಿಗಳನ್ನು ಸ್ವಾತಂತ್ಯ್ರವಾಗಿ ಆಡಳಿತ ಮಾಡಲು ಬಿಡಬೇಕು, ಅವರ ಪತಿರಾಯರು ದರ್ಬಾರ್ ಮಾಡುವುದು ಬೀಡಬೇಕು ಎಂದು ಹೇಳಿದರು. 

   ಹತ್ತು ಮಹಿಳೆಯರಿಗೆ ಸ್ಪಂದನ ಸ್ತೀ ಪ್ರಶಸ್ತಿ ವಿತರಿಸಲಾಯಿತು, ರಾಷ್ಟ ಮತ್ತು ರಾಜ್ಯ ಪ್ರಶಸ್ತಿ ಪಡೆದ ನಾಡೋಜ ಸಾಲು ಮರದ ತಿಮ್ಮಕ್ಕ, ಚಲನಚಿತ್ರ ಕಲಾವಿದೆ ಸತ್ಯಭಾಮ, ಪ್ರಜಾಪಿತ ಬ್ರಹ್ಮಕುಮಾರಿ ಪಾರ್ವತಕ್ಕ, ಸಮಾಜ ಸೇವಕರಾದ ಸಲೋಚಾನ, ಡಾ.ವನಜಾ ರಾಜ್ ಕುಮಾರ್ ರವರಿಗೆ ಪ್ರಶಸ್ತಿ, ಫಲಕ ನೀಡಿ ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಹಿಳೆಯರ ತಮಟೆ ವಾದ್ಯ, ಯಕ್ಷಗಾನ ಮತ್ತು ನಾಡಪ್ರಭು ಕೆಂಪೇಗೌಡರ ಸೊಸೆಯಾದ ಲಕ್ಷ್ಮೀದೇವಿರವರ ಜೀವನ ಚರಿತ್ರೆ ನೃತ್ಯರೂಪಕ ಆಯೋಜಿಸಲಾಗಿತ್ತು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ