ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ


ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 


    ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಮುಂಬೈ ಮತ್ತು ಇತರ ಕಡೆಗಳಲ್ಲಿ ಚಲನಚಿತ್ರೋತ್ಸವಗಳು ಅತ್ಯಂತ ಹೆಚ್ಚು ವೀಕ್ಷಕರನ್ನು ತಲುಪಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇರ್ಶಕರು, ನಟರು, ಲೇಖಕರು ಹಲವು ರಾಷ್ಟ್ರಗಳಿಂದ ಚಿಂತನೆಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಈ ಚಲನಚಿತ್ರೋತ್ಸವಗಳು ವೇದಿಕೆಯಾಗಿವೆ. 
ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ, ಚಿತ್ರೋದ್ಯಮದ ವಿದ್ಯಾರ್ಥಿಗಳಿಗೆ ತೋರಿಸಿಕೊಡಲು ಮತ್ತು ಹೇಗೆ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಈ ಚಿತ್ರಗಳ ಮೂಲಕ ತಿಳಿಸಿಕೊಡಲಿದೆ. ಈ ಉತ್ಸವವು ಒಂದು ವೇದಿಕೆ ನಿರ್ಮಾಣ ಮಾಡಿಕೊಡಲಿದೆ.
       ಬೆಂಗಳೂರಿನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮೂರು ದಿನಗಳ ಕಾಲ ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಸುಮಾರು ೭೦ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದೇ ಸಂದ‘ರ್ದಲ್ಲಿ ಚಿತ್ರರಂಗದ ಪರಿಣಿತರು ಹಾಗೂ ಚಲನಚಿತ್ರ ತಯಾರಕರೊಂದಿಗೆ ಸಂವಾದಗಳು ಸಹ ನಡೆಯಲಿವೆ. ಈ ವೇದಿಕೆಯು ಚಲನಚಿತ್ರರಂಗದ ವಿದ್ಯಾರ್ಥಿಗಳಿಗೆ ಅತ್ಯಂತ ದೊಡ್ಡ ಅ‘್ಯಯನದ ವೇದಿಕೆಯಾಗಿ ಒದಗಿಬರಲಿದೆ ಮತ್ತು ಕನ್ನಡಚಲನಚಿತ್ರ ರಂಗದ ಪ್ರಮುಖರನ್ನು ಅಭಿನಂದಿಸುವ ಕಾರ್ಯಕ್ರಮವೂ ಇಲ್ಲಿ ನಡೆಯಲಿದೆ. 
       ಈ ಚಲನಚಿತ್ರೋತ್ಸವವನ್ನು ಇನೋವೇಟಿವ್ ಫಿಲ್ಮ್ ಅಕಾಡೆಮಿ ಆಯೋಜಿಸಿದ್ದು, ಕಳೆದ ೧೦ ವರ್ಷಗಳಿಂದ ಬೆಂಗಳೂರಿನಲ್ಲಿ ಚಲನಚಿತ್ರ ರಂಗದ ವಿವಿ‘ ಕ್ಷೇತ್ರಗಳಲ್ಲಿ ತರಬೇತಿ ನೀಡುತ್ತಿದೆ. ಅಕಾಡೆಮಿಯು ಚಿತ್ರರಂಗದ ಹಲವು ಪ್ರಮುಖರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಡಿಪ್ಲೊಮೋ ಹಾಗೂ ಚಲನಚಿತ್ರರಂಗದ ವಿವಿ‘ ತರಬೇತಿ ನೀಡುತ್ತಿದೆ. 
     ಚಲನಚಿತ್ರೋತ್ಸವದ ಸಲಹೆಗಾರ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ ಮತ್ತು ಇತರ ‘ಾಷೆಗಳು ಸೇರಿದಂತೆ ‘ಾರತೀಯ ಚಲನಚಿತ್ರರಂಗ ಪ್ರತಿ ವರ್ಷ ೧೫೦೦ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಚಲನಚಿತ್ರ ಮಾ‘್ಯಮದ ಮೂಲಕ ಪಾಪ್ ಸಂಸ್ಕೃತಿ ಬಹಳಷ್ಟು ದೊಡ್ಡ ನಗರಗಳಲ್ಲಿ ಜನರನ್ನು ಪ್ರ‘ಾವಿಸಿದೆ. ಚಲನಚಿತ್ರ ರಂಗ ಅತೀ ಹೆಚ್ಚು ಜನರನ್ನು ಆಕರ್ಷಿಸಿದ್ದರೂ ಕೂಡ ಚಲನಚಿತ್ರ ರಂಗಕ್ಕೆ ತರಬೇತಿ ನೀಡುವಂತ ವ್ಯವಸ್ಥೆ ಅತೀ ಕಡಿಮೆ ಇದೆ. ಈ ರಂಗ ಕೇವಲ ಮನೋರಂಜನೆ ನೀಡುವ ಮಾ‘್ಯಮವಾಗಿ ಮಾತ್ರವಲ್ಲ ಶಿಕ್ಷಣ ನೀಡುವಂತ ಮಾ‘್ಯಮವಾಗಿಯೂ ವಿಕಾಸಗೊಳ್ಳಬೇಕು ಎಂದರು.
     ಈ ಚಲನಚಿತ್ರೋತ್ಸವಕ್ಕೆ ಸುಮಾರು ೨೦೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಪ್ರತಿ ದಿನ ಬರುವ ನಿರೀಕ್ಷೆ ಇದೆ. ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿರಲಿದೆ. ಚಿತ್ರೋತ್ಸವದ ಆಯೋಜಕರು ವೈಯಕ್ತಿಕವಾಗಿ ರಾಜ್ಯಾದ್ಯಂತ ಇರುವ ಸುಮಾರು ೧೦೦೦ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆದುಕೊಂಡು ಬರಲು ವ್ಯವಸ್ಥೆ ಮಾಡಿದ್ದಾರೆ. 
       ಚಲನಚಿತ್ರೋತ್ಸವ ಕಾರ್ಯನಿರ್ವಾಹಕ ನಿರ್ದೇಶಕ ಉಪಾಸನ ಮಿತ್ತಲ್ ಚಿತ್ರೋತ್ಸವ ಆಯೋಜನೆ ಕುರಿತು ಮಾತನಾಡಿ, ಚಲನಚಿತ್ರೋತ್ಸವದಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ವಿಶೇಷವಾದ ೬ ಪ್ರದರ್ಶನ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸ್ಕ್ರೀನ್‌ನಲ್ಲಿ  ೭೦ ಜನರು ಏಕಕಾಲಕ್ಕೆ ಚಿತ್ರ ಪ್ರದರ್ಶನ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ. ಚಲನಚಿತ್ರರಂಗದ ವಿದ್ಯಾರ್ಥಿಗಳು ಈ ವಾಸ್ತವಿಕವಾಗಿ ಕೂಡ ಅರ್ಥ ಮಾಡಿಕೊಳ್ಳಲು ಸಾ‘್ಯವಾಗಲಿದೆ. 
  ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕರು, ಲೇಖಕರು, ತಂತ್ರಜ್ಞರು ಬರುವ ಮೂಲಕ ಇಲ್ಲಿನ ಚಿತ್ರೋದ್ಯಮ ಮತ್ತು ಮಾರುಕಟ್ಟೆ ವ್ಯವಸ್ಥೆ ಕುರಿತು ತಿಳಿದುಕೊಳ್ಳಲಿದ್ದಾರೆ. ಜತೆಗೆ ತಮ್ಮ ಅನು‘ವಗಳನ್ನು ಹೇಳಿಕೊಳ್ಳಲು ಇದು ವೇದಿಕೆಯಾಗಿದೆ. ‘ವಿಷ್ಯದಲ್ಲಿ ಸಹ‘ಾಗಿತ್ವ ಹೊಂದಲು ಈ ಚಿತ್ರೋತ್ಸವ ನೆಪವಾಗಬಹುದು ಎಂಬ ಆಶಯ ವ್ಯಕ್ತಪಡಿಸಿದರು. 
ಏ.೧೫ರಂದು ಕನ್ನಡ ಚಿತ್ರರಂಗಕ್ಕೆ ವಿಶೇಷ ಸೇವೆ ಸಲ್ಲಿಸಿದ ಸಾ‘ಕರಿಗೆ  ‘ಕನ್ನಡ ಗೌರವ’ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇನೋವೇಟಿವ್ ಫಿಲ್ಮ್ ಅಕಾಡೆಮಿಗೆ ೧೦ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ