ಮೆಜೆಸ್ಟಿಕ್ ನಲ್ಲಿ ರಿಯಾಯಿತಿ ದರದ ನೀತಿ ವಸ್ತ್ರ ಭಂಡಾರ ಮಾಳಿಗೆ


ರಾಜಸ್ತಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೀತಿ ವಸ್ತ್ರ ಭಂಡಾರ ಮಾಳಿಗೆ


     ರಾಜಸ್ಥಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೂತನವಾಗಿ ನೀತಿ ವಸ್ತ್ರ ಭಂಡಾರ ಮಳಿಗೆಗೆ ಸಂಘದ ಯೋಜನಾ ವ್ಯವಸ್ಥಾಪಕ ಕೈಲಾಸ್ ಜೈನ್ ಚಾಲನೆ ನೀಡಿದರು.
       ನಂತರ ಮಾತನಾಡಿದ ಅವರು ಈ ಮಳಿಗೆಯಲ್ಲಿ 100 ರೂ ಗಳಿಗೆ ಯಾವುದೇ ರೀತಿಯ 3 ಬಟ್ಟೆಗಳನ್ನು ಖರೀದಿಸಬಹುದು ಈ ಮಳಿಗೆಯಲ್ಲಿ ಮಕ್ಕಳಿಂದ ವೃದ್ಧರವರೆಗಿನ ಎಲ್ಲ ವಯಸ್ಸಿನವರಿಗೆ ಬಟ್ಟೆಗಳು ದೊರೆಯಲಿವೆ, ಬಡವರಿಗೆ ಪ್ರಯೋಜನವಾಗಲೆಂದು ಈ ಮಳಿಗೆ ತೆರೆಯಲಾಗಿದು ಈ ಮಳಿಗೆಯಲ್ಲಿ ಉಪಯೋಗಿಸಿದ ಬಟ್ಟೆಗಳನ್ನು ಮರು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ, ಆದ್ದರಿಂದ ಶ್ರೀಮಂತರು ಬಟ್ಟೆಗಳನ್ನು ಉಪಯೋಗಿಸಿ ಬಿಸಾಡುವ ಬದಲು ನೀತಿ ವಸ್ತ್ರ ಭಂಡಾರಕ್ಕೆ ದಾನವಾಗಿ ನೀಡಬಹುದು, ಈ ಮಳಿಗೆ ಯಶಸ್ವಿಯಾದರೆ ನಗರದಲ್ಲಿ ಮತ್ತಷ್ಟು ಮಳಿಗೆಗಳನ್ನು ತೆರೆಯಲಾಗುವುದು.
          ನಮ್ಮ ಸಂಘದ ವತಿಯಿಂದ ಇಪ್ಪತ್ತಕ್ಕೂ ಹೆಚ್ಚು  ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಉಚಿತ ಪುಸ್ತಕಗಳು, ಬಟ್ಟೆಗಳು, ಆಟದ ಉಪಕರಣಗಳು, ಕಂಪ್ಯೂಟರ್ ಮತ್ತು ಜಲ ಶುದ್ಧೀಕರಣವನ್ನು ವಿತರಿಸುತ್ತಿದ್ದೇವೆ. ಇದರಿಂದ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗೂ  ಎಲ್ಲ ಸಮುದಾಯದ ಉಪಯೋಗಕ್ಕಾಗಿ ಬಳಸಲು 6 ಮೋಕ್ಷ ವಾಹಿನಿ (ಶ್ರದ್ಧಾಂಜಲಿ ವಾಹನ) ಗಳನ್ನು ಉಚಿತವಾಗಿ ನೀಡಲಾಗಿದೆ ಅದರ ಎಲ್ಲ ಖರ್ಚು ವೆಚ್ಚಗಳು ಅಂದರೆ ಚಾಲಕರ ಸಂಬಳ, ಡೀಸೆಲ್, ವಾಹನದ ದುರಸ್ತಿ  ಸೇವೆಗಳಂತೆ ಎಲ್ಲಾ ವಾಹನದ ನಿರ್ವಹಣೆಯ ವೆಚ್ಚಗಳನ್ನು ಸಂಘದ ವತಿಯಿಂದ ಭರಿಸಲಾಗುತ್ತದೆ. ಈ ಸೇವೆಗಾಗಿ ಸಾರ್ವಜನಿಕರು ಈ ದೂರವಾಣಿ ಸಂಖ್ಯೆ 8884922022 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ