ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ 


   ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್. ಮಹದೇವಸ್ವಾಮಿ  ಘನ  ಸರ್ಕಾರವು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ದಿನಾಂಕ 29/06/2017 ರಂದು ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ವಿಷಯವಾಗಿ  ವಿಶೇಷ ರಾಜ್ಯಪತ್ರ ಹೊರಡಿಸಿದ್ದು ಈ ಆದೇಶದಂತೆ ಮೀಸಲಾತಿ ನೀಡದೆ ಕಾವೇರಿ ನೀರಾವರಿ ನಿಗಮ ನರಸೀಪುರ ಹೆಚ್ ಆರ್ ಬಿ ಆರ್  ವಿಭಾಗದಲ್ಲಿ ಟೆಂಡರ್ ಕರೆದಿದ್ದಾರೆ . ನರಸಿಪುರ ತಾಲ್ಲೂಕಿನ ಎಸ್ಸಿ /ಎಸ್ಟಿ  ಬಂಧುಗಳು ರೂ ಐವತ್ತು ಲಕ್ಷಗಳ ವರೆಗೆ ಮೀಸಲಾತಿ ಇರುವುದರಿಂದ ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಐವತ್ತು ಲಕ್ಷಗಳ ಮೇಲಿನ ಅಂದಾಜು ವೆಚ್ಚ ಬರುವ ಹಾಗೆ ತಯಾರಿಸಿ ಪ್ಯಾಕೇಜ್ ಟೆಂಡರ್ ಕರೆದಿದ್ದು ರದ್ದು ಮಾಡಿ ಸರ್ಕಾರಿ ಆದೇಶದಂತೆ ಮೀಸಲಾತಿ ನೀಡಿ ಟೆಂಡರ್ ಕರೆಯ ಬೇಕೆಂದು ಮನವಿ ಮಾಡಿರುತ್ತಾರೆ ಈ ವಿಷಯವಾಗಿ ಹೊಳೆನರಸೀಪುರ ತಾಲ್ಲೂಕಿನ ಸಿಎಸ್ಟಿ ಗುತ್ತಿಗೆದಾರರು ಐದು ದಿನಗಳ ಧರಣಿ ಕೂಡ ಮಾಡಿರುತ್ತಾರೆ
    ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರಾದ ಎಂ. ಪುಟ್ಟರಾಜು ಅವರು ಟೆಂಡರನ್ನು ರದ್ದು ಮಾಡುವುದಾಗಿ ಹೇಳಿ ರದ್ದು  ಮಾಡದೆ ಟೆಂಡರ್ ಅನ್ನು ಮುಂದುವರಿಸಿರುತ್ತಾರೆ.
     ಈ ಮೂಲಕ ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಿ ಟೆಂಡರ್ ಕರೆದಿರುವ ಟೆಂಡರ್ ಅನ್ನು ರದ್ದು ಮಾಡಿ ಮೀಸಲಾತಿ ನೀಡುವುದು ಮತ್ತು ಎಲ್ಲಾ ಸಮುದಾಯದ ಸಣ್ಣ ಸಣ್ಣ ಗುತ್ತಿಗೆದಾರರು ಭಾಗವಹಿಸಲು ಅವಕಾಶವಾಗುವ ರೀತಿಯಲ್ಲಿ ಟೆಂಡರ್ ಕರೆಯಬೇಕು ಹಾಗೂ ಕಾರ್ಯಪಾಲಕ ಅಭಿಯಂತರರಾದ ಎಂ.ಪುಟ್ಟರಾಜು  ಅವರನ್ನು ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989 ಮತ್ತು ನಿಯಮ 1995 ರ ಅಡಿಯಲ್ಲಿ ಬಂಧಿಸಬೇಕೆಂದು  ಎಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ