ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ


 ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ


      ಬಿ.ಎಸ್. ಪಾಟೀಲ್ ರವರ  ತಂಡ ಸರಕಾರಕ್ಕೆ  ಸಲ್ಲಿಸಿರುವ  ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ  ಪದ್ಮನಾಭರೆಡ್ಡಿ   ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ  ಬಿ.ಎಸ್. ಪಾಟೀಲ್  ವರದಿಯ ಮೇಲೆ  ಮಾತನಾಡತ್ತ. ಯಾವುದೇ  ಕಾರಣಕ್ಕೆ  ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ  ಬಿ.ಎಸ್ ಪಾಟೀಲ್ ವರದಿಯನ್ನು  ಒಟ್ಟಾಗಿ  ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ   ಅಭಿಪ್ರಾಯ  ಪಡೆದುಕೊಳ್ಳದೆ ವರದಿ ನೀಡಲಾಗಿದೆ  ಎಂದು ಅಸಮಾದಾನ ವ್ಯಕ್ತಪಡಿಸಿದರು.  

     ಪದ್ಮನಾಭರೆಡ್ಡಿ ಯವರ ಮಾತಿಗೆ  ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್  ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು.

    ನಂತರ ಮಾತನಾಡಿದ ಶಾಸಕರುಗಳಾದ ಭೈರತಿ ಸುರೇಶ್ ಮುನಿರತ್ನ ನಾಯ್ಡು ಮತ್ತು  ಎಸ್ ಟಿ ಸೋಮಶೇಖರ್ ಕಸದ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟ್ರಾಕ್ಟರ್ ಗಳಿಗೆ ನೇರವಾಗಿ ಹಣ ಜಮೆ ಮಾಡುವ ಬದಲು ಟೆಂಡರ್ ಪ್ರಕ್ರಿಯೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
    ಇವರ ಪ್ರಶ್ನೆಗೆ ಉತ್ತರ ನೀಡಿದ ಮೇಯರ್ ಸಂಪತರಾಜ್  ಬಿ.ಎಸ್. ಪಾಟೀಲ್ ವರದಿ ಕುರಿತು‍ ಮಾತನಾಡಲು ವಿಶೇಷ ಸಭೆ ನಡೆಸಲಾಗುವುದು. ಕಸದ ಸಮಸ್ಯೆಗೆ ಟೆಂಡರ್  ಪ್ರಕ್ರಿಯೆ  ಹಾಗೂ  ಆನ್ ಲೈನ್ ಖಾತೆಯ ಬಗ್ಗೆಯೂ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
           

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ