ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ;
ರೋಟರಿ ಕ್ಲಬ್ 115ನೇ ವಾರ್ಷಿಕೋತ್ಸವ; ಬೆಂಗಳೂರಿನಲ್ಲಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ ಬೆಂಗಳೂರು-ರೋಟರಿಯನ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3190 ಇಂಟರ್ ನ್ಯಾಷನಲ್ ತನ್ನ 115ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಭಾನುವಾರ 23ರಂದು ರೋಟರಿ ಶಾಂತಿ ನಡಿಗೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಆರಂಭಗೊಳ್ಳುವ ಶಾಂತಿ ನಡಿಗೆ ಮೈಸೂರು ಬ್ಯಾಂಕ್ ವೃತ್ತವರೆಗೆ ನಡೆಯಲಿದೆ. ಬೆಳಗ್ಗೆ 7.30 ರಿಂದ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರೋಟರಿ ನಂದಿನಿಯ ಅಧ್ಯಕ್ಷ ಮದುಸೂಧನ್ ಆರ್ ಬಿಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿ ಸಂದೇಶ ಸಾರಲು ಈ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 50ಕ್ಕೂ ಹೆಚ್ಚು ರೋಟರಿ ಕ್ಲಬ್‍ಗಳು ಈ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಜೊತೆಗೆ ಬಿಳಿ, ನೀಲಿ, ಹಸಿರು, ಹಳದಿ ಬಲೂನ್‍ಗಳನ್ನು ಇದೇ ಸಂದರ್ಭದಲ್ಲಿ ಹಾರಿ ಬಿಡುವ ಮೂಲಕ ದೇಶದಲ್ಲಿ ಶಾಂತಿ ಸೌಹಾÀರ್ದತೆ ನೆಲೆಸ ಬೇಕು ಎಂಬ ಸಂದೇಶವನ್ನು ನೀಡಲಾಗುವುದು ಎಂದು ತಿಳಿಸಿದರು. ಬಿಳಿ, ನೀಲಿ, ಹಸಿರು, ಹಳದಿ ಬಲೂನ್ ಗಳನ್ನು ಜಿಲ್ಲಾ ರೋಟರಿ ಗವರ್ನರ್ ಡಾ....