ಮಹಿಳಾ ಕಾಂಗ್ರೆಸ್ ಇಂದಿರಾ ಗಾಂಧಿ

 ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜಯಂತಿ    *'ಇಂದಿರಾ ಜ್ಯೋತಿ'* ಹೆಸರಿನಲ್ಲಿ ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ದೀಪ ವಿತರಣ

                  ಮಾಜಿ ಮುಖ್ಯಮಂತ್ರಿಗಳು ಹಾಗು ವಿರೋಧ ಪಕ್ಷದ ನಾಯಕರೂ ಆದ ಶ್ರೀ ಸಿದ್ಧರಾಮಯ್ಯ ರವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ವೇಳೆ ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು. 

             ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯನವರು  ಈ ಸೋಲಾರ್ ದೀಪಗಳನ್ನು ಕೊಡುವುದರಿಂದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ ಮತ್ತು ಇಂದಿನ ಯುವ ಪೀಳಿಗೆಗೆ ಇಂದಿರಾಜಿ ಅವರನ್ನು ಪರಿಚಯಿಸುವಂತಹ ಕಾರ್ಯಕ್ರಮ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ, ನಾನು ಚಿಕ್ಕವನಿದ್ದಾಗ ಬೀದಿ ದೀಪದಲ್ಲಿ ಓದುತ್ತಿದ್ದೆ, ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದೆ. ಆದರೆ ಈಗ ಕಾಲ ಬದಲಾಗಿದೆ ಅಂತಹ ಒಂದು ದಿನಗಳು ಇದ್ದಂತಹ ಸಂದರ್ಭದಲ್ಲಿ ಇಂದು ಸೋಲಾರ್ ಅನ್ನು ಬಳಕೆ ಮಾಡಿಕೊಂಡು ಈ ದೀಪಗಳನ್ನು ಕೊಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ಆಶಯವನ್ನು ವ್ಯಕ್ತ ಪಡಿಸಿ ಈ ಕಾರ್ಯಕ್ರಮಕ್ಕೆ ಶುಭಾಷಯವನ್ನು ಕೋರಿದರು.

          ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ರವರು ಮಾತನಾಡಿ ಇಂದಿರಾ ಜ್ಯೋತಿಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಬಡ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಸೋಲಾರ್ ದೀಪಗಳನ್ನು ನೀಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಇಂದಿರಾ ಅವರ ಹೆಸರಿನಲ್ಲಿ ರೂಪಿಸಲಾಗಿದೆ ಹಾಗೂ ಮುಂದಿನ ಪೀಳಿಗೆಗೆ ಕೂಡ ಇಂದಿರಾ ಅವರ ಪರಿಚಯವನ್ನು ಮಾಡಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿರುವುದರಿಂದ ಅವರ ಹೆಸರಿನಲ್ಲಿ *"ಇಂದಿರಾ ಜ್ಯೋತಿ"* ಎಂಬ ಕಾರ್ಯಕ್ರಮವನ್ನು ಮಾಡಿ ಇಂದಿರಾ ಅವರ ಪರಿಚಯದ ಪುಸ್ತಕವನ್ನು ಕೂಡ ಅವರ ಭಾವಚಿತ್ರದೊಂದಿಗೆ  ನೀಡುವಂತಹ ಕಾರ್ಯಕ್ರಮ ಇದಾಗಿದೆ.

     ಸುಮಾರು 30 ಬಡ ಹೆಣ್ಣುಮಕ್ಕಳಿಗೆ ಸೋಲಾರ್ ದೀಪಗಳನ್ನು ನೀಡುವುದರ ಮೂಲಕ ಸನ್ಮಾನ್ಯ ಸಿದ್ದರಾಮಯ್ಯನವರು ಮತ್ತು ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹಮದ್ ರವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಸೋಲಾರ್ ದೀಪಗಳನ್ನು ನೀಡುತ್ತಿರುವ ಮುಖ್ಯ ಉದ್ದೇಶ ಜನಜಾಗೃತಿಯನ್ನು ಮೂಡಿಸುವಂತದ್ದು. ವಿದ್ಯುತ್ ಬೆಲೆ ಏರಿಕೆಯಾಗಿದೆ ಬಡ ಕುಟುಂಬಗಳು ವಿದ್ಯುತ್ ಬೆಲೆಯನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಮಸ್ಯೆ ಕೂಡ ಕಾಡುತ್ತಿದೆ. ಓದುತ್ತಿರುವ ಹೆಣ್ಣುಮಕ್ಕಳಿಗೆ ದೀಪದ ಬೆಳಕು ತುಂಬಾ ಅವಶ್ಯಕವಾಗಿದೆ. ಇಂದಿರಾ ಅವರ ಹೆಸರಿನಲ್ಲಿ ಈ ಸೋಲಾರ್ ದೀಪಗಳನ್ನು ಕೊಡುವುದರ ಮೂಲಕ ಅವರನ್ನು ಪುನರ್ ನಮನ ಮಾಡಿಕೊಳ್ಳುವಂತಹ ಅವಕಾಶ. ಇಂದಿನ ಯುವಪೀಳಿಗೆಗೆ ಹಾಗೂ ವಿದ್ಯಾರ್ಥಿಗಳಿಗೆ ಅವರನ್ನು ಪರಿಚಯಿಸುವಂತಹ ಅವಕಾಶವನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಮಾಡುತ್ತಿದ್ದೇವೆ. 

       ನವೆಂಬರ್  30 ರವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರುಗಳ ನೇತೃತ್ವದಲ್ಲಿ, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಸೇರಿ ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ದೀಪಗಳನ್ನು ನೀಡುವ ಮೂಲಕ *"ಇಂದಿರಾ ಜ್ಯೋತಿ"* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು. 

          ಈ  ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ  ಸಲೀಂ ಅಹಮ್ಮದ್,  ಮೈನಾರಿಟಿ ಅಧ್ಯಕ್ಷರಾದ ಸೈಯದ್ ಅಹಮ್ಮದ್, ಬೆಂಗಳೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರುಗಳು, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು* ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ