ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ

ಕೊರೊನಾ ವೈರಸ್ ಬಗ್ಗೆ  ಜನರಲ್ಲಿ ಜಾಗೃತ ಮೂಡಿಸುವಂತೆ  ಕಾರ್ಯಕರ್ತರಿಗೆ ಕರೆ 

ಕರುನಾಡ ಜನಸ್ಪಂದನ ವೇದಿಕೆಯ ಅಧ್ಯಕ್ಷ  ನಟರಾಜ್ ಬಿ.ಪಿ 


         ಕೊರೊನಾ ವೈರಸ್ ಬಗ್ಗೆ ಜನರು ಭಯಪಡುವ ಬದಲು ಮುಂಜಾಗ್ರತೆ ವಹಿಸಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕು ಕೊರೊನಾ ವೈರಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ  ಕರುನಾಡ ಜನಸ್ಪಂದನ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಟರಾಜ್ ಬಿ.ಪಿ ಕರೆ ನೀಡಿದರು.

    ಭಾರತದಲ್ಲಿ ಕೋವಿಡ್-19 ಭಾರಿ ಹಾನಿಯನ್ನುಂಟು ಮಾಡುತ್ತಿದ್ದು ಈ ಪಿಡುಗಿನಿಂದ ಸಂಭವಿಸುತ್ತಿರುವ ಸಾವು-ನೋವಿನ ವರದಿಗಳು ಭಯಾನಕ ಹಾಗೂ ಹೃದಯ ಹಿಂಡುವಂತಿವೆ ಎಂದು ಕರುನಾಡ ಜನಸ್ಪಂದನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಟರಾಜ್ ಬಿ.ಪಿ ಆತಂಕ ವ್ಯಕ್ತಪಡಿಸಿದ್ದಾರೆ. 

     ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಕೊರೊನಾ ವೈರಸ್ ಆವರಿಸಿ ಜನರನ್ನು ಭಯಭೀತರನ್ನಾಗಿಸಿತ್ತು. ಇತ್ತೀಚೆಗೆ ಲಸಿಕೆ ಬಂದ ನಂತರ ಜನರು ಭಯದಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿತ್ತು ಆದರೆ ಈಗ ಕೊರೊನಾ ವೈರಸ್ ಎರಡನೇ ಅಲೆ ಸಾಗರೋಪಾದಿಯಲ್ಲಿ ಹರಡುವ ಮೂಲಕ ಮತ್ತೆ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ಕಂಡು ಬರುತ್ತಿದೆ. ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಗೆ ಕರೆ ನೀಡಿದೆ, ಕೊರಾನಾ ಎರಡನೇ ಅಲೆ ರಾಜ್ಯದಲ್ಲಿ ಶುರುವಾಗಿದೆ ಜನರೇ ಇದರ ಬಗ್ಗೆ  ಕಡಿವಾಣಕ್ಕೆ ಸಹಕಾರ ನೀಡಬೇಕು. ಲಾಕ್ ಡೌನ್ ಅಂತಿಮ ಪರಿಹಾರವಲ್ಲ, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ವೈದ್ಯರ ಸಲಹೆ ಮತ್ತು ಅಗತ್ಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕು ಹಾಗೂ ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಸಾರ್ವಜನಿಕರು ಲಸಿಕೆ ಪಡೆದು ಸರ್ವಜನಿಕ ಸ್ಥಳಗಳಲ್ಲಿ ಓಡಾಡುವ ಬದಲು ಮನೆಯಲ್ಲಿಯೇ ಸುರಕ್ಷಿತವಾಗಿರಬೇಕು. ಪ್ರತಿಯೊಬ್ಬರು ನಾವು ಸೋಂಕಿನ ಪಕ್ಕದಲ್ಲೇ ಇದ್ದೇವೆ ಎಂಬ ಸಣ್ಣ ಎಳೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಅದು ನಮ್ಮೊಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಿದೆ. ಇನ್ನು ರಾಜ್ಯದ  ಜನರು ಜಾಗರೂಕತೆ ವಹಿಸಬೇಕು ಇದರಿಂದ ರಕ್ಷಿಸಿಕೊಳ್ಳಲು ಮಾಸ್ಕ್‌, ಸ್ಯಾನಿಟೈಸ್‌ ಕಡ್ಡಾಯವಾಗಿ ಮಾಡಿಕೊಂಡು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ಧ್ಯೇಯವಾಕ್ಯವನ್ನು ಪಾಲಿಸಬೇಕೆಂದು ಮನವಿ ಮಾಡಿದರು.

   ನಿತ್ಯ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದು ರೋಗಿಗಳಿಂದ ಆಸ್ಪತ್ರೆಗಳು ತುಂಬಿಹೋಗಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ತೀವ್ರವಾಗಿ ಅಸ್ವಸ್ಥರಾದವರಿಗೆ ಆಮ್ಲಜನಕ ಪೂರೈಕೆ ಅಸಾಧ್ಯವಾಗಿ ಬಹಳ ಸಂಕಷ್ಟದ ಪರಿಸ್ಥಿತಿ ಮನೆಮಾಡಿದೆ. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದು ಬಯಸಲು ಆಗುವುದಿಲ್ಲ. ಜನಸಾಮಾನ್ಯರಾದ ನಾವುಗಳು ಇಂತಹ ಕಠಿಣ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಇತ್ತೀಚೆಗೆ ಕೋವಿಡ್ ಕೈಮೀರಿ ಪಸರಿಸುತ್ತಿದ್ದು, ಇದನ್ನು ನಿರ್ವಹಿಸುವುದು ಸರ್ಕಾರದ ಜೊತೆಗೆ ಜನರ ಕರ್ತವ್ಯವೂ ಆಗಿದೆ. ಸರ್ಕಾರದ ಜೊತೆಗೆ ಜನತೆ ಸ್ಪಂದಿಸುವುದು ಅತಿ ಮುಖ್ಯವಾಗಿದೆ. ಹೀಗಾಗಿ ಸರ್ಕಾರದ ನಿಯಮ ಮಾರ್ಗಸೂಚಿ ಹಾಗೂ ಕೋವಿಡ್ ಲಕ್ಷಣ, ಚಿಕಿತ್ಸೆ ಕುರಿತು ಜನರಲ್ಲಿ ಸ್ವಯಂ ಜಾಗೃತಿ ಮೂಡಿಸಲು ಕರುನಾಡ ಜನಸ್ಪಂದನ ವೇದಿಕೆಯ ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚೆಚ್ಚು ಮುಂದಾಗಬೇಕು. ಹೀಗಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಅನಾವಶ್ಯಕ ಸಭೆ ಸಮಾರಂಭ ಜನ ಸೇರುವುದು ಸೇರಿದಂತೆ ಕೋವಿಡ್ ಹರಡಲು ಸಹಕರಿಸುವುದೆಲ್ಲವನ್ನು ತಡೆದು ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
 
   ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ರೋಗದೊಡನೆ ಭಯ, ಆತಂಕಗಳು ಸೇರಿಕೊಂಡು ಮನುಷ್ಯರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೊರೊನಾ ಕುರಿತು ಸಾಮಾಜಿಕ ಅರಿವು ಮೂಡಿಸುವ ಸಣ್ಣ ಪ್ರಯತ್ನವನ್ನು ಕರುನಾಡ ಜನಸ್ಪಂದನ ವೇದಿಕೆಯ ವತಿಯಿಂದ ಮಾಡೋಣ. ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರೊಡನೆ, ನಮ್ಮವರನ್ನೂ, ಸಮಾಜವನ್ನೂ, ದೇಶವನ್ನೂ ರಕ್ಷಿಸಿಕೊಳ್ಳಬಹುದು ಕೊರೋನ ಬಗ್ಗೆ ಭಯ ಬೇಡ ಮುನ್ನೆಚ್ಚರಿಕೆ ಇರಲಿ ಎಂದು ಮನವಿ ಮಾಡಿಕೊಂಡರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ