ಸಚಿವ ಕೆ. ಗೋಪಾಲಯ್ಯ ಮತ ಯಾಚನೆ

 ಕೂಲಿ ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ 

ಸಚಿವ ಕೆ. ಗೋಪಾಲಯ್ಯ ಮತ ಯಾಚನೆ

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡ್ ನಲ್ಲಿರುವ ಆರ್ ಎಂ ಸಿ ಯಾರ್ಡ್ ನಲ್ಲಿ ಇಂದು ಇಲ್ಲಿಯ ಮಾರುಕಟ್ಟೆ ವರ್ತಕರು ಹಾಗೂ ವ್ಯಾಪಾರಸ್ಥರು, ಹಾಗೂ ಕೂಲಿ ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಸಚಿವ ಕೆ ಗೋಪಾಲಯ್ಯ ಮತ ಯಾಚನೆ ಮಾಡಿದರು. 

ಒಂದು ಮಾರುಕಟ್ಟೆ ದಾಸನಪೂರ ಕ್ಕೆ ತೆರವು ಮಾಡಬೇಕು ಎಂದು ಅಂದು ಹೇಳಿದಾಗ ನಾನು ಮುಂದೆ ನಿಂತು ನಿಮ್ಮ ಕಷ್ಟ ಹಾಗೂ ಬವಣೆ ನೀಗಿಸಲು ನಾನು ಅಂದು ಹೆದ್ದಾರಿ ತಡೆ ಮಾಡಿ ಈ ಸ್ಥಳದಲ್ಲಿರುವ ನಿಮ್ಮೆಲ್ಲರ ಅಂಗಡಿ ಮುಗ್ಗಟ್ಟುಗಳು ತೆರವು ಮಾಡದಂತೆ ಹೋರಾಟ ಮಾಡಿ ಉಳಿಸಿರುವೆ, ಜೊತೆಗೆ ನಿಮ್ಮ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಕ್ಷೇತ್ರದಲ್ಲಿ ಒಳ್ಳೆಯ ಗುಣಮಟ್ಟದ ಶಾಲೆ ಅಭಿವೃದ್ಧಿ ಮಾಡಿ ಉಚಿತ ಶಿಕ್ಷಣ ನೀಡುವಲ್ಲಿ ನಾನು ಹಾಗೂ ನಮ್ಮ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದ್ದೇವೆ. ಜೊತೆಗೆ ಕೊರೋನ ಸಂಕಷ್ಟದಲ್ಲಿ ಫುಡ್ ಕಿಟ್ ಔಷಧಿ ಕಿಟ್ ಹಾಗೂ ಆಕ್ಸಿಜನ್  ಸೇರಿದಂತೆ ಹಲವು ರೀತಿಯ ಸಹಾಯ ಮಾಡಿದ್ದೇನೆ. ಮುಂಬರುವ 10 ನೇ ತಾರೀಖಿನ ದಿನ ತಾವೆಲ್ಲರೂ ತಪ್ಪದೆ ಭಾರತೀಯ ಜನತಾ ಪಕ್ಷದ ಚಿನ್ಹೆ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ನಮ್ಮನ್ನ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲಿಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನರೇಂದ್ರಬಾಬು, ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಎಂ ಮಹದೇವ್ ವಾರ್ಡ್ ಅಧ್ಯಕ್ಷ ಡಾಕ್ಟರ್ ನಾಗೇಂದ್ರ, ಸ್ಥಳೀಯ ಮುಖಂಡರುಗಳಾದ ಮಲ್ಲಪ್ಪ, ಉಮಾಪತಿ ನಾಯ್ಡು, ಸಾಯಿ ರೆಡ್ಡಿ, ಪುಟ್ಟ ಸ್ವಾಮಿ, ರಾಘವೇಂದ್ರ ಸುರೇಶ್ ಸೇರಿದಂತೆ ಆರ್ ಎಂ ಸಿ ಯಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES