ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ

ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರ ಕೆ. ಗೋಪಾಲಯ್ಯ ಭರ್ಜರಿ ಮತ ಪ್ರಚಾರ ಬೆಂಗಳೂರು ಗ್ರಾಮಾಂತರ : ಆನೇಕಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್ ರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿ. ಅವರ ಭಾವಚಿತ್ರ ಇಡಿದು ಮತವನ್ನು ಕೇಳಿದ್ದೇವೆ. ಕ್ಷೇತ್ರದ ಜನರು ಹೆಚ್ಚಿನ ಬಹುಮತವನ್ನು ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಸ್ಥಳೀಯ ಶಾಸಕರು ಅಬಕಾರಿ ಸಚಿವರಾದ ಕೆ ಗೋಪಾಲಯ್ಯರವರು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಆನೇಕಲ್ ತಾಲೂಕಿನಲ್ಲಿ ಹುಲ್ಲಹಳ್ಳಿ ಶ್ರೀನಿವಾಸ್ ರವರ ಪರವಾಗಿ ಮತಯಾಚನೆ ನಡೆಸಿ ಅವರು ಮಾತನಾಡಿದರು. ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾದ ಸಮುದಾಯ. ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಕಟ್ಟಿರುವಂತಹ ಇತಿಹಾಸವನ್ನು ಸೂರ್ಯ ಹಾಗೂ ಚಂದ್ರ ಇರುವವರೆಗೂ ಸಾಧ್ಯವಿಲ್ಲ ಎಂದರು. ಪ್ರತಿನಿತ್ಯ ನಾಡಪ್ರಭು ಕೆಂಪೇಗೌಡರನ್ನು ನಾವೆಲ್ಲರೂ ಪ್ರತಿನಿತ್ಯ ಪೂಜೆ ಮಾಡಬೇಕು ಒಕ್ಕಲಿಗ ಸಮುದಾಯ ಒಂದು ಜಾತಿಗೆ ಸೀಮಿತವಾಗದೆ ಸಹಾಯ ಮಾಡುವುದಿಲ್ಲ. ಕಷ್ಟಪಟ್ಟು ದುಡಿಯುವುದು ನಾವೆಲ್ಲರೂ ರೈತ ಕುಟುಂಬದವರು ಎಂದರು. ಅನೇಕ ಸಮುದಾಯಗಳಿಗೆ ಆಶ್ರಯವನ್ನು ಕೊಟ್ಟು ಇವತ್ತು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ...