ಬೆಂಗಳೂರು : ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ 2026ನೇ ಸಾಲಿನ ಬಜೆಟ್ನಲ್ಲಿ ಶೋಷಿತ ಸಮುದಾಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಗರದ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಮುದಾಯಗಳ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳು, ಸೌಲಭ್ಯಗಳು ಮತ್ತು ಮೀಸಲಾತಿ ಸಂಬಂಧಿತ ವಿಚಾರಗಳನ್ನು ಚರ್ಚಿಸಿದರು. ಬಜೆಟ್ನಲ್ಲಿ ಶೋಷಿತ ವರ್ಗಗಳಿಗೆ ನ್ಯಾಯಸಮ್ಮತ ಹಂಚಿಕೆ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ಈ ವೇಳೆ ಸೂರ್ಯವಂಶ ಕ್ಷತ್ರಿಯ ಸಮಾಜದ ಮುಖಂಡರಾದ ರಾಘವ್ ಸೂಲೆಗೈ ಅವರು ತಮ್ಮ ಸಮಾಜ ಎದುರಿಸುತ್ತಿರುವ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತಂದರು. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿ, ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಲಯನ್ಸ್ ಜಿಲ್ಲಾ 317ಎ ಸುವರ್ಣ ಮಹೋತ್ಸವ ಅದ್ದೂರಿ ಯಶಸ್ಸು – ಸೇವಾ ಚಟುವಟಿಕೆಗಳ ಮಹಾಸಂಗಮ ಬೆಂಗಳೂರು : ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ಎ ವತಿಯಿಂದ 50ನೇ ಸುವರ್ಣ ಮಹೋತ್ಸವ ಹಾಗೂ ಜಿಲ್ಲಾ ಸಮಾವೇಶವು ವಿಜಯನಗರದ ಬಂಟ್ಸ್ ಸಂಘ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಐದು ದಶಕಗಳ ಸೇವಾ ಪಯಣವನ್ನು ಸ್ಮರಿಸುವ ಈ ಮಹೋತ್ಸವವು ಸಮಾಜ ಸೇವೆ, ಮಾನವೀಯ ಮೌಲ್ಯಗಳು ಹಾಗೂ ಬದ್ಧತೆಯ ಪ್ರತೀಕವಾಗಿ ಗಮನ ಸೆಳೆಯಿತು. ಜಿಲ್ಲಾ ರಾಜ್ಯಪಾಲರಾದ ಡಾ. ಜಿ. ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲಯನ್ಸ್ ಅಂತರರಾಷ್ಟ್ರೀಯ ದ್ವಿತೀಯ ಉಪಾಧ್ಯಕ್ಷರಾದ ಡಾ. ಮನೋಜ್ ಷಾ ಉದ್ಘಾಟಿಸಿದರು. ಲಯನ್ಸ್ ಇಂಟರ್ನ್ಯಾಷನಲ್ ಮಾಜಿ ನಿರ್ದೇಶಕರಾದ ವಿಜಯ್ ಕುಮಾರ್ ರಾಜು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.ಮಲ್ಟಿಪಲ್ ಕೌನ್ಸಿಲ್ ಚೇರ್ಪರ್ಸನ್ ಮೋಹನ್ ಕುಮಾರ್ ಎನ್, ಪ್ರಥಮ ಉಪ ರಾಜ್ಯಪಾಲರಾದ ಕೆ. ಈಶ್ವರನ್, ದ್ವಿತೀಯ ಉಪ ರಾಜ್ಯಪಾಲರಾದ ಶಶಿಧರ್ ಗಂಜಿಗಟ್ಟಿ, ಆತಿಥೇಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಯಾದಾಳಂ, ಲಯನ್ ಅಶೋಕ್ ಕುಲಕರ್ಣಿ, ಲಯನ್ ಎಸ್. ಮನೋಜ್ ಕುಮಾರ್, ಹರಿಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುವರ್ಣ ಮಹೋತ್ಸವದ ಅಂಗವಾಗಿ 25 ಶಹೀದ್ ಕುಟುಂಬಗಳಿಗೆ ಸನ್ಮಾನ, 25 ವೀರ ಯೋಧರಿಗೆ ಗೌರವ, ವಿಕಲಚೇತನರಿಗೆ 6 ಕಸ್ಟಮೈಸ್ ವೀಲ್ಚೇರ್ಗಳ ವಿತರಣೆ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಮಕ್ಕಳ ...
ರವಿಕುಮಾರ್ ಗೌಡ ಅವರ ನೇತೃತ್ವದ ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ ಸಮಾಜ ಸೇವಕ ರವಿಕುಮಾರ್ ಗೌಡ ಅವರ ನೇತೃತ್ವದಲ್ಲಿ ಸಾಮೂಹಿಕ ಶ್ರೀನಿವಾಸ ಕಲ್ಯಾಣ ನಡೆಸುವುದರ ಬಗ್ಗೆ ಮಂಡ್ಯ ಜಿಲ್ಲೆಯ ಎಲ್ಲಾ ಹಿರಿಯ ಮುಖಂಡರುಗಳ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್ ಗೌಡ ಫೆಬ್ರವರಿ 10 ರಂದು ಮಂಡ್ಯ ಜಿಲ್ಲೆಯ ಸರ್ಕಾರಿ ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಶ್ರೀನಿವಾಸ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ ಇದರ ಉದ್ದೇಶ ಮಳೆ, ಬೆಳೆ, ಸಮೃದ್ಧಿಯಾಗಿ ಆಗಲಿ ರೈತಾಪಿ ವರ್ಗದ ಹಾಗೂ ಎಲ್ಲಾ ವರ್ಗದ ಪ್ರಜೆಗಳಿಗೆ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ವಿಶೇಷವೇನೆಂದರೆ ಶ್ರೀನಿವಾಸ ಸ್ವಾಮಿಯ ಮೂಲ ಸ್ಥಾನವಾದ ತಿರುಪತಿಯ ಪ್ರಧಾನ ಅರ್ಚಕರಾದ ರಮಣ ದೀಕ್ಷಿತ್ ಅವರೇ ಪುರೋಹಿತಿಕೆ ನಡೆಸಲಿದ್ದಾರೆ ಎಂದು ತಿಳಿಸಿದರು.
Comments
Post a Comment