ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ
ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ ಬಿ.ಎಸ್. ಪಾಟೀಲ್ ರವರ ತಂಡ ಸರಕಾರಕ್ಕೆ ಸಲ್ಲಿಸಿರುವ ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ ಬಿ.ಎಸ್. ಪಾಟೀಲ್ ವರದಿಯ ಮೇಲೆ ಮಾತನಾಡತ್ತ. ಯಾವುದೇ ಕಾರಣಕ್ಕೆ ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ ಬಿ.ಎಸ್ ಪಾಟೀಲ್ ವರದಿಯನ್ನು ಒಟ್ಟಾಗಿ ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ ಅಭಿಪ್ರಾಯ ಪಡೆದುಕೊಳ್ಳದೆ ವರದಿ ನೀಡಲಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಪದ್ಮನಾಭರೆಡ್ಡಿ ಯವರ ಮಾತಿಗೆ ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್ ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು. ನಂತರ ...