ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ಸನ್ಮಾನ ಸಮಾರಂಭ

ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ಸನ್ಮಾನ ಸಮಾರಂಭ 

 

ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ನೂತನವಾಗಿ ಆಯ್ಜೆಗೊಂಡಿರುವ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು. 

ಸನ್ಮಾನ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ್, ನೂತನವಾಗಿ ಆಯ್ಕೆಗೊಂಡಿರುವ  ಸದಸ್ಯರು ಎಲ್ಲ. ಸಮಾಜದ ಕಾರ್ಯ ಗಳನ್ನು ಮಾಡುವಂತಾಗಬೇಕು ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ನೀಡುವ ನಿಯಮವಿದ್ದು, ಆ ನಿಟ್ಟಿನಲ್ಲಿ ನೀವು ಆಯ್ಕೆಯಾಗಿದೀರಾ ಎಂದರು.

ಕುಂಭಾರ ಜನಾಂಗಕ್ಕೆ ಪ್ರತ್ಯೇಕ ನಿಗಮದ ಅವಶ್ಯ ಕತೆ ಇದೆ ಇದು ನನ್ನ ವೈಯಕ್ತಿಕ ನಿಲುವಾಗಿದೆ. ಅವರ ಹಿತಾಸಕ್ತಿಗಳ ಈಡೇರಿಕೆಗೆ ಚಿಕ್ಕ ಜನಾಂಗಗಳಿಗೆ ನಿಗಮದ ಅವಶ್ಯಕತೆ ಇದೆ. ನಿಗಮ ರಚನೆ ವಿಚಾರದಲ್ಕಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಶಾಲಾ ನೊಂದಣಿ ವಿಚಾರದಲ್ಲಿ ಜಾತಿ ನಮೂನೆಯನ್ನು ಅಳವಡಿಸುವ ವಿಚಾರದಲ್ಕಿ ಎಚ್ಚರಿಕೆ ವಹಿಸಬೇಕು. ಮುಂದೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಯುವ ಸೈನ್ಯ ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ ಮತ್ತಿತರರು ಹಾಜರಿದ್ದರು.

Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ