ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್ ಮಾರುಕಟ್ಟೆಗೆ

ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್  ಮಾರುಕಟ್ಟೆಗೆ

ಬೆಂಗಳೂರು ಜೂ, 25; ಇಂಟರ್ ನ್ಯಾಷನಲ್ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ ಕುರಿತ 9 ನೇ ಏಷ್ಯಾ ವಲಯದ ಪ್ರದರ್ಶನ ಮತ್ತು ಮಾರಾಟ ಮೇಳ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿದೆ.

     ಈ ತಿಂಗಳ 26 ರ ವರೆಗೆ ನಡೆಯಲಿರುವ ಮೇಳದಲ್ಲಿ ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್  ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಮತ್ತು ಕೇಬಲ್ ವಲಯದಲ್ಲಿ ವಿಸ್ಮಯವನ್ನು ಮೂಡಿಸುತ್ತಿರುವ ಈ ಮೇಳದಲ್ಲಿ ಉಷಾ ಕೇಬಲ್ ಮಳಿಗೆ ಗಮನ ಸೆಳೆಯುತ್ತಿದೆ.

   ಉಷಾ ಕೇಬಲ್ ಭಾರತದ ಅತ್ಯಂತ ವಿಶ್ವಾಸಾರ್ಹ ಕೇಬಲ್ ಆಗಿದ್ದು, ಐ.ಎಸ್.ಐ ಮತ್ತು ಬಿ.ಎಸ್.ಐ ಮಾನ್ಯತೆ ಪಡೆದುಕೊಂಡಿದೆ. ಹಲವಾರು ವರ್ಷಗಳ ಸಂಶೋಧನೆ ಮತ್ತು ಪರಿಶ್ರಮದಿಂದ ಉಷಾ ಕೇಬಲ್ ಉತ್ಪನ್ನಗಳು ಗಮನ ಸೆಳೆಯುತ್ತಿವೆ ಎಂದು ಉಷಾ ಕೇಬಲ್ಸ್ ನ ನಿರ್ದೇಶಕ ಅಮಾನ್ ಗುಪ್ತಾ ಹೇಳಿದ್ದಾರೆ.

Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ