Posts

jayakarnataka janapara vedike

Image
  ಜಯ ಕರ್ನಾಟಕ ಜನಪರ  ವೇದಿಕೆಯಿಂದ  ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ.           ಬೆಂಗಳೂರು: ಟೋಲ್ ಗಳಲ್ಲಿ ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆಗಳನ್ನು ಬಿಡದೆ  ಟೋಲ್ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ 8ನೇ ಮೈಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.              ವಾಹನ  ಸವಾರರಿಂದ ಟೋಲ್ ಸುಂಕವನ್ನು ಪಡೆದು ಸರ್ವಿಸ್ ರಸ್ತೆಗಳಿಲ್ಲ  ಹಾಗೂ ಉತ್ತಮ ಗುಣಮಟ್ಟದ ನಿರ್ವಹಣೆ ಇಲ್ಲ. ಕೂಡಲೇ ರಾಜ್ಯದ ಎಲ್ಲಾ ಟೋಲ್ ಕಂಪನಿಗಳು ಸರ್ವಿಸ್ ರಸ್ತೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ  ಆಗ್ರಹಿಸಿದರು.          ಭಾರತದ ಸರ್ವೋಚ್ಚ ನ್ಯಾಯಾಲಯ ನಡೆದಾಡುವ ಸ್ವತಂತ್ರ ಹಕ್ಕನ್ನು ಸಂವಿಧಾನ ರೀತಿಯಲ್ಲಿ ನೀಡಿರುತ್ತದೆ. ಅಲ್ಲದೆ ಭಾರತದಲ್ಲಿ ಖರೀದಿಮಾಡುವ ಪ್ರತಿ ವಾಹನಕ್ಕು ಜೀವಮಾನದ ರಸ್ತೆ ತೆರಿಗೆ ( ಲೈಫ್ ಟೈಮ್ ರೋಡ್ ಟ್ಯಾಕ್ಸ್) ಪಡೆದುಕೊಂಡ ನಂತರವಷ್ಟೇ ಪ್ರಾದೇಶಿಕ ಸಾರಿಗೆಯ ಅಧಿಕಾರಿಗಳು ವಾಹನಗಳನ್ನು ನಮೂದಿಸಿಕೊಂಡು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಜೀವಮಾನದ ರಸ್ತೆ ತೆರಿಗೆಯಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಲು ನಿಗದಿ ಆಗಿರುತ್ತದೆ. ಆದರೂ ಕೂಡ ದುರಾದೃಷ್ಟಕರ ವಿಚಾರವೇನೆಂದರೆ ಇಡೀ ಭಾರತದ ತುಂಬಾ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ

ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ಸನ್ಮಾನ ಸಮಾರಂಭ

Image
ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ  ವತಿಯಿಂದ ಸನ್ಮಾನ ಸಮಾರಂಭ    ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ನೂತನವಾಗಿ ಆಯ್ಜೆಗೊಂಡಿರುವ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.  ಸನ್ಮಾನ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ್, ನೂತನವಾಗಿ ಆಯ್ಕೆಗೊಂಡಿರುವ  ಸದಸ್ಯರು ಎಲ್ಲ. ಸಮಾಜದ ಕಾರ್ಯ ಗಳನ್ನು ಮಾಡುವಂತಾಗಬೇಕು ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ನೀಡುವ ನಿಯಮವಿದ್ದು, ಆ ನಿಟ್ಟಿನಲ್ಲಿ ನೀವು ಆಯ್ಕೆಯಾಗಿದೀರಾ ಎಂದರು. ಕುಂಭಾರ ಜನಾಂಗಕ್ಕೆ ಪ್ರತ್ಯೇಕ ನಿಗಮದ ಅವಶ್ಯ ಕತೆ ಇದೆ ಇದು ನನ್ನ ವೈಯಕ್ತಿಕ ನಿಲುವಾಗಿದೆ. ಅವರ ಹಿತಾಸಕ್ತಿಗಳ ಈಡೇರಿಕೆಗೆ ಚಿಕ್ಕ ಜನಾಂಗಗಳಿಗೆ ನಿಗಮದ ಅವಶ್ಯಕತೆ ಇದೆ. ನಿಗಮ ರಚನೆ ವಿಚಾರದಲ್ಕಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಶಾಲಾ ನೊಂದಣಿ ವಿಚಾರದಲ್ಲಿ ಜಾತಿ ನಮೂನೆಯನ್ನು ಅಳವಡಿಸುವ ವಿಚಾರದಲ್ಕಿ ಎಚ್ಚರಿಕೆ ವಹಿಸಬೇಕು. ಮುಂದೆ ಇದು ಅನುಕೂಲವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಯುವ ಸೈನ್ಯ ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ ಮತ್ತಿತರರು ಹಾಜರಿದ್ದರು.

ಅಲೈಯನ್ಸ್ ವಿವಿ ಪ್ರಕರಣ ಸೂಕ್ತ ತನಿಖೆಯಾಗಲಿ ಮಧುಕರ್ ಜಿ ಅಂಗೂರ್

Image
  ಅಲೈಯನ್ಸ್ ವಿವಿ ನಕಲಿ ಸಹಿ ಬಳಸಿ ಬಹುಕೋಟಿ ಹಗರಣ ಪ್ರಕರಣ ಸೂಕ್ತ ತನಿಖೆಯಾಗಲಿ:   ಸಂಸ್ಥಾಪಕ ಮಧುಕರ್ ಜಿ. ಆಂಗೂರ್           ಪ್ರಪಂಚದಲ್ಲಿ ಕರೋನ ಆರ್ಭಟ ಇಳಿಮುಖಗೊಳ್ಳುತ್ತಿದ್ದಂತೆ, ಜನರನ್ನು ನಾನಾ ಬಗೆಯ ಹಗರಣಗಳ ಸುದ್ಧಿಗಳು ಆಕರ್ಷಿಸುತ್ತಿವೆ. ಅಂತಹ ಸುದ್ಧಿಗಳ ನಡುವೆ ಜನರನ್ನು ಹುಬ್ಬೆರಿಸುವಂತೆ ಮಾಡಿರುವ ಸುದ್ಧಿಗಳಲ್ಲಿ ಬೆಂಗಳೂರಿನಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ವಂಚನೆಯ ಹಗರಣವು ಪ್ರಮುಖ ಸುದ್ಧಿ ಆಗಿ ಗಮನ ಸೆಳೆದಿದೆ.        ಬೆಂಗಳೂರಿನ “ಅಲೈಯನ್ಸ್ ಯೂನಿವರ್ಸಿಟಿ”ಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವು ರಾಜ್ಯ ಮಟ್ಟದಲ್ಲೇ, ಅಲ್ಲದೇ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಸಂಬಂಧವಾಗಿ ನಮ್ಮ ವಾಹಿನಿಯ ಸಂದರ್ಶನದ ವೇಳೆ ನಮ್ಮ ಸುದ್ಧಿಗಾರರೊಂದಿಗೆ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಆಜೀವ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಧುಕರ್ ಜಿ. ಆಂಗೂರ್ ಮಾತನಾಡಿ ನಾನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಅಲ್ಲಿ ದುಡಿದ ಹಣವನ್ನು ಸದುಪಯೋಗಪಡಿಸುವ ಉದ್ದೇಶದಿಂದ, ಇಲ್ಲಿ ನಮ್ಮ ಭಾರತದಲ್ಲಿ ವಿದ್ಯಾ ರಂಗದ ಮುಖಾಂತರ ಸೇವೆಯನ್ನು ಮಾಡುವ ಕನಸಿನ ಫಲವಾಗಿ, ಇದೇ ನಮ್ಮ ಬೆಂಗಳೂರಿನಲ್ಲಿ “ಅಲೈಯನ್ಸ್ ಯೂನಿವರ್ಸಿಟಿ”ಯ ಜನನವಾಯಿತು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video        ಅನಿವಾಸಿ ಭಾರತೀಯನಾಗಿರುವ ನನಗೆ ಈ ಕೆಲಸ

ಭಾರತ್ ಬಂದ್ ಗೆ ದಲಿತ ಯುವಕರ ಸೇವಾ ದಳದ ಬೆಂಬಲ : ಎಸ್. ವೆಂಕಟೇಶ್

Image
  ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳದ ಬೆಂಬಲ : ಎಸ್.ವೆಂಕಟೇಶ್          ಬೆಂಗಳೂರು : ಕೇಂದ್ರದ ನೂತನ ಕೃಷಿ ಮಸೂದೆ ವಿರೋಧಿಸಿ ಡಿ.8ರಂದು ಕರೆ ನೀಡಿರುವ ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳ ಬೆಂಬಲ ಸೂಚಿಸಿದೆ.      ದಲಿತ ಯುವಕರ ಸೇವಾದಳದ ಅಧ್ಯಕ್ಷ ಎಸ್. ವೆಂಕಟೇಶ್ ಮಾತನಾಡಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭಾರತ ಬಂದ್‌ನಲ್ಲಿ ನಾವು ಕೂಡ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video       ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದಲಿತ ಯುವಕರ ಸೇವಾ ದಳದ ಬೆಂಬಲವಿದೆ, ಬೇರೆ ಬೇರೆ ಜಿಲ್ಲೆಗಳಿಂದ ರೈತರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ನಾವು ಕೂಡ ಎಪಿಎಂಸಿ ಬಿಲ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ರೈತರ ಕಲ್ಯಾಣವಾಗುವುದಿಲ್ಲ ಎಂದರು.        ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ, ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ. ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿ

ಡಾ.ಬಿ.ಆರ್.ಅಂಬೇಡ್ಕರ್ ರವರ 64ನೇ ಮಹಾ ಪರಿನಿರ್ವಾಣ ಕಾರ್ಯಕ್ರಮ

Image
  ದಲಿತ ಯುವಕರ ಸೇವಾದಳದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ  64ನೇ ಮಹಾ ಪರಿನಿರ್ವಾಣದ ದಿನ       ಡಾ. ಬಿ.ಆರ್.ಅಂಬೇಡ್ಕರ್  ಸಂವಿಧಾನ ರಚನಾ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದ ಅಂಶಗಳು ಸರಿಯಾದ ರೀತಿಯಲ್ಲಿ ಅನುಷ್ಠಾನ ಗೊಂಡರೆ ಅವರಆಶಯಗಳನ್ನು ಈ ಡೇರಿಸಿದಂತಾಗುತ್ತದೆ ಎಂದು ದಲಿತ ಯುವಕರ ಸೇವಾದಳದ ಅಧ್ಯಕ್ಷ ಎಸ್. ವೆಂಕಟೇಶ್ ಹೇಳಿದ್ದಾರೆ.             ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ         Click here to watch this video      ಡಾ.ಬಿ.ಆರ್.ಅಂಬೇಡ್ಕರ್ 64ನೇ ಮಹಾ ಪರಿನಿರ್ವಾಣದ ದಿನವಾದ ಇಂದು ವಿಧಾನ ಸೌಧ ಮುಂಭಾಗದಲ್ಲಿರುವ ಪ್ರತಿಮೆಗೆ ಪುಷ್ಪವಿರಿಸಿ ಮಾತನಾಡಿದ ಅವರು. ಅಂಬೇಡ್ಕರ್ ಅವರು ಬಡವರ ಹಾಗೂ ದಲಿತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇವುಗಳು ನಿಜವಾಗಲೂ ಬಡವರಿಗೆ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ನಮ್ಮ ಸಂಘಟನೆ ವತಿಯಿಂದ ಬೆಂಗಳೂರಿನ ವಿವಿಧಡೆ ಸುಮಾರು ಎರಡು ಸಾವಿರ ಮಂದಿ ದಲಿತ ಬಡವರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಹೋರಾಟ ನಡೆಸಿದ್ದೇವೆ ಎಂದರು.

ಮಹಿಳಾ ಕಾಂಗ್ರೆಸ್ ಇಂದಿರಾ ಗಾಂಧಿ

Image
  ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜಯಂತಿ       *'ಇಂದಿರಾ ಜ್ಯೋತಿ'* ಹೆಸರಿನಲ್ಲಿ ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ದೀಪ ವಿತರಣ  ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ದೇಶದ ಪ್ರಥಮ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರ 103 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ  'ಇಂದಿರಾ ಜ್ಯೋತಿ'  ಎನ್ನುವ ರಾಜ್ಯವ್ಯಾಪಿ ಚಾಲನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.                     ಮಾಜಿ ಮುಖ್ಯಮಂತ್ರಿಗಳು ಹಾಗು ವಿರೋಧ ಪಕ್ಷದ ನಾಯಕರೂ ಆದ ಶ್ರೀ ಸಿದ್ಧರಾಮಯ್ಯ ರವರು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ವೇಳೆ  ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು.               ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯನವರು  ಈ ಸೋಲಾರ್ ದೀಪಗಳನ್ನು ಕೊಡುವುದರಿಂದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ ಮತ್ತು ಇಂದಿನ ಯುವ ಪೀಳಿಗೆಗೆ ಇಂದಿರಾಜಿ ಅವರನ್ನು ಪರಿಚಯಿಸುವಂತಹ ಕಾರ್ಯಕ್ರಮ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ, ನಾನು ಚಿಕ್ಕವನಿದ್ದಾಗ ಬೀದಿ ದೀಪದಲ್ಲಿ ಓದುತ್ತಿದ್ದೆ, ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದೆ. ಆದರೆ ಈಗ ಕಾಲ ಬದಲಾಗಿದೆ ಅಂತಹ ಒಂದು ದಿನಗಳು ಇದ್ದಂತಹ ಸಂದರ್ಭದಲ್ಲಿ ಇಂದು ಸೋಲಾರ್ ಅನ್ನು ಬಳಕೆ ಮಾಡಿಕೊಂಡು ಈ ದೀಪಗಳನ್ನು ಕೊಡುವುದರಿಂದ

ಫೆಮಿನಾ ಮಿಸ್ ಇಂಡಿಯಾ 2020 ಡಿಜಿಟಲ್ ಹೋಗುತ್ತದೆ

  ಫೆಮಿನಾ ಮಿಸ್ ಇಂಡಿಯಾ 2020 ಡಿಜಿಟಲ್ ಹೋಗುತ್ತಿದೆ ಅಕ್ಟೋಬರ್ 2020, ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕವು ನಮ್ಮ ಸಾಮಾನ್ಯ ಜೀವನವನ್ನು ಸಂಪೂರ್ಣವಾಗಿ ಗೇರ್‌ನಿಂದ ಹೊರಹಾಕಿದೆ ಮತ್ತು ನಾವು ನಮ್ಮ ಜೀವನವನ್ನು ಹೇಗೆ ರಚಿಸುತ್ತೇವೆ ಎಂಬುದನ್ನು ಪುನಃ ನೋಡುವಂತೆ ಮಾಡಿದೆ. ಮಿಸ್ ಇಂಡಿಯಾ ಆರ್ಗನೈಸೇಶನ್‌ನಲ್ಲಿ ನಾವು ಸಕಾರಾತ್ಮಕ ಚಿಂತನೆಯ ಶಕ್ತಿಯನ್ನು ನಂಬುತ್ತೇವೆ ಮತ್ತು ಒಟ್ಟಾಗಿ, ಈ ಹಿನ್ನಡೆಯಿಂದ ನಾವು ವಿಜೇತರಾಗಿ ಬರಬಹುದು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಮ್ಮ ಯುವ ಮಿಸ್ ಇಂಡಿಯಾ ಆಕಾಂಕ್ಷಿಗಳ ಕನಸುಗಳನ್ನು ಜೀವಂತವಾಗಿರಿಸುವುದರಲ್ಲಿ ನಾವು ನಂಬುತ್ತೇವೆ. ಸೆಫೊರಾ ಮತ್ತು ರೊಪೊಸೊ ಸಹ-ಚಾಲಿತ ಡೈನಾಮಿಕ್ ವರ್ಚುವಲ್ ಫಾರ್ಮ್ಯಾಟ್‌ನಿಂದ ನಡೆಸಲ್ಪಡುವ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ಪ್ರತಿಭಾವಂತ ಯುವತಿಯರ ಜೀವನವನ್ನು ಪರಿವರ್ತಿಸುವ ಮತ್ತು ದೇಶವನ್ನು ಪ್ರತಿನಿಧಿಸುವ ವೇದಿಕೆಯನ್ನು ನೀಡುವ ತನ್ನ ಸಂಪ್ರದಾಯವನ್ನು ಮುಂದುವರೆಸುವ ಭರವಸೆ ನೀಡಿದೆ. ಗ್ಲಾಮರ್ ಮತ್ತು ಫ್ಯಾಶನ್ ಉದ್ಯಮದಲ್ಲಿ ಪ್ರತಿಮೆಗಳಾಗಿ ಮಾರ್ಪಟ್ಟ ಯುವ ಪ್ರತಿಭಾವಂತ ಮಹಿಳೆಯರ ಜೀವನವನ್ನು ಪರಿವರ್ತಿಸುವ ಸುಮಾರು ಆರು ದಶಕಗಳ ಕಾಲ, ವಿಎಫ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ಕೋ-ಸೆಫೊರಾ ಮತ್ತು ರೊಪೊಸೊ-ಚಾಲಿತವಾಗಿದೆ, ಸಂಪೂರ್ಣ ವಿಸ್ತರಿಸುವ ಉದ್ದೇಶದಿಂದ ಐಕಾನ್‌ಗಳನ್ನು ರಚಿಸುವ ತನ್ನ ಸಂಪ್ರದಾಯವನ್ನು ಮುಂದುವರೆಸಲು ಪ್ರತಿಜ್ಞೆ ಮಾಡಿದೆ.