Posts

ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ

Image
 ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ       ಬಿ.ಎಸ್. ಪಾಟೀಲ್ ರವರ  ತಂಡ ಸರಕಾರಕ್ಕೆ  ಸಲ್ಲಿಸಿರುವ  ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ  ಪದ್ಮನಾಭರೆಡ್ಡಿ   ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ  ಬಿ.ಎಸ್. ಪಾಟೀಲ್  ವರದಿಯ ಮೇಲೆ  ಮಾತನಾಡತ್ತ. ಯಾವುದೇ  ಕಾರಣಕ್ಕೆ  ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ  ಬಿ.ಎಸ್ ಪಾಟೀಲ್ ವರದಿಯನ್ನು  ಒಟ್ಟಾಗಿ  ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ   ಅಭಿಪ್ರಾಯ  ಪಡೆದುಕೊಳ್ಳದೆ ವರದಿ ನೀಡಲಾಗಿದೆ  ಎಂದು ಅಸಮಾದಾನ ವ್ಯಕ್ತಪಡಿಸಿದರು.        ಪದ್ಮನಾಭರೆಡ್ಡಿ ಯವರ ಮಾತಿಗೆ  ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್  ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು.     ನಂತರ ಮಾತನಾಡಿದ ಶಾಸಕರುಗಳಾದ ಭೈರತಿ ಸುರೇಶ್ ಮುನಿರತ್ನ ನಾಯ್ಡು ಮತ್ತು  ಎಸ್ ಟಿ ಸೋಮಶೇಖರ್ ಕಸದ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟ್ರಾಕ್ಟರ್ ಗಳಿಗೆ ನೇರವಾಗಿ ಹಣ ಜಮೆ ಮಾಡುವ ಬದ
Image
ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ     ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಗುತ್ತಿಗೆದಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್. ಮಹದೇವಸ್ವಾಮಿ  ಘನ  ಸರ್ಕಾರವು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರರಿಗೆ ದಿನಾಂಕ 29/06/2017 ರಂದು ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ವಿಷಯವಾಗಿ  ವಿಶೇಷ ರಾಜ್ಯಪತ್ರ ಹೊರಡಿಸಿದ್ದು ಈ ಆದೇಶದಂತೆ ಮೀಸಲಾತಿ ನೀಡದೆ ಕಾವೇರಿ ನೀರಾವರಿ ನಿಗಮ ನರಸೀಪುರ ಹೆಚ್ ಆರ್ ಬಿ ಆರ್  ವಿಭಾಗದಲ್ಲಿ ಟೆಂಡರ್ ಕರೆದಿದ್ದಾರೆ . ನರಸಿಪುರ ತಾಲ್ಲೂಕಿನ ಎಸ್ಸಿ /ಎಸ್ಟಿ  ಬಂಧುಗಳು ರೂ ಐವತ್ತು ಲಕ್ಷಗಳ ವರೆಗೆ ಮೀಸಲಾತಿ ಇರುವುದರಿಂದ ಉದ್ದೇಶಪೂರ್ವಕವಾಗಿ ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಐವತ್ತು ಲಕ್ಷಗಳ ಮೇಲಿನ ಅಂದಾಜು ವೆಚ್ಚ ಬರುವ ಹಾಗೆ ತಯಾರಿಸಿ ಪ್ಯಾಕೇಜ್ ಟೆಂಡರ್ ಕರೆದಿದ್ದು ರದ್ದು ಮಾಡಿ ಸರ್ಕಾರಿ ಆದೇಶದಂತೆ ಮೀಸಲಾತಿ ನೀಡಿ ಟೆಂಡರ್ ಕರೆಯ ಬೇಕೆಂದು ಮನವಿ ಮಾಡಿರುತ್ತಾರೆ ಈ ವಿಷಯವಾಗಿ ಹೊಳೆನರಸೀಪುರ ತಾಲ್ಲೂಕಿನ ಸಿಎಸ್ಟಿ ಗುತ್ತಿಗೆದಾರರು ಐದು ದಿನಗಳ ಧರಣಿ ಕೂಡ ಮಾಡಿರುತ್ತಾರೆ     ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರಾದ ಎಂ. ಪುಟ್ಟರಾಜು ಅವರು ಟೆಂಡರನ್ನು ರದ್ದು ಮಾಡುವುದಾಗಿ ಹೇಳಿ ರದ್ದು  ಮಾಡದೆ ಟೆಂಡರ್ ಅನ್ನು ಮುಂದುವರಿಸಿರುತ್ತಾ

ಮಹೇಂದ್ರ ಮುನೋತ್ ಅವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆ

Image
   ಮಹೇಂದ್ರ ಮುನೋತ್ ಅವರ    51ನೇ ವರ್ಷದ ಹುಟ್ಟುಹಬ್ಬ ಆಚರಣೆ         ಬಾಲಾಜಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ   ಮುನೋತ್ ಅವರ  51ನೇ ಹುಟ್ಟುಹಬ್ಬದ ಆಚರಣೆಯನ್ನು ವಿಜಯನಗರದ ಬಾಲಾಜಿ ಮೆಡಿಕಲ್ಸ್ ಸಮೀಪದಲ್ಲಿ  ಮಹೇಂದ್ರ  ಅಭಿಮಾನಿಗಳು ಆಚರಿಸಿದರು.    ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹೇಂದ್ರ  ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ತಿಂಡಿಗಳನ್ನು ವಿತರಿಸಿದರು.     ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಆನಂದ್ ಹೊಸೂರು, ಶಿವರಾಮೇಗೌಡ, ಜಿಮ್ ನವೀನ, ನಾಗರಿಕರು ಹಾಗೂ ಅಭಿಮಾನಿಗಳು ಶುಭ ಕೋರಿದರು         ನಂತರ ಮಾತನಾಡಿದ ಮಹೇಂದ್ರ  ಕರ್ನಾಟಕದ ಜನತೆ ನಾಡ ಪ್ರೇಮಿಗಳು ದೇಶಪ್ರೇಮಿಗಳು ಹೃದಯ ಶ್ರೀಮಂತರು ಎಲ್ಲರಿಗೂ ನನ್ನ  ಹೃದಯ ಪೂರ್ವಕ ನಮಸ್ಕಾರಗಳು ಯಾವ ಮನುಷ್ಯ ತನಗಾಗಿ ಬದುಕುತನೊ ಅವನ ಜೀವನ ವ್ಯರ್ಥ ನಿಜವಾದ ಜೀವನ ಅಂದರೆ ಅವರಶಕ್ತಿಯನ್ನು ನಿಶ್ಶಕ್ತಿ ಒಂದ ವ್ಯಕ್ತಿಗಳಿಗೆ ಸದುಪಯೋಗ  ಮಾಡುತ್ತಾರೆ.  ಸೇವೆಯೂ ಬರೀ  ಪ್ರದರ್ಶನವಾಗಬಾರದು ಸೇವೆ ಮಾನವನ ಕರ್ತವ್ಯವಾಗಬೇಕು ನನಗೆ ಯಾವ  ಸ್ವಾರ್ಥ ಇಲ್ಲ ನನ್ನಲ್ಲಿ ಒಂದೇ ಒಂದು ಸ್ವಾರ್ಥ  ಅಂದರೆ ಎಲ್ಲರ ಹೃದಯದಲ್ಲಿ ನನ್ನ ಸ್ಥಾನವನ್ನು ಬಯಸುತ್ತೇನೆ.  ಇಟ್ಟಿಗೆ ಸಿಮೆಂಟ್ನಿಂದ ಬಂಗಲೆ ಕಟ್ಟಬಹುದು ಆದರೆ  ನನ್ನ ಮನೆಯನ್ನು ನಿಮ್ಮ ವಿಶಾಲವಾದ  ಹೃದಯದಲ್ಲಿ ಕಟ್ಟಲು ಬಯಸುತ್ತೇನೆ.        ನನಗೆ ನನ್ನ ಹುಟ್ಟ

ಸರ್ವಜನ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Image
ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಪ್ರತಿಭಟನೆ      ದಲಿತರ ರುದ್ರಭೂಮಿ ಕಬಳಿಕೆ ಯತ್ನವನ್ನು ವಿರೋಧಿಸಿ ಸರ್ವಜನ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರಿಂದ   ದೊಡ್ಡಕಲ್ಲಸಂದ್ರದ ರುದ್ರಭೂಮಿಯ ಮುಂದೆ ಪ್ರತಿಭಟನೆ  ಮಾಡಲಾಯಿತು.       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಉತ್ತರಹಳ್ಳಿ  ಕೆ.ಎನ್. ಮೂರ್ತಿ  ಈ ರುದ್ರಭೂಮಿಯೂ ಸುಮಾರು 100 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಸುತ್ತಮುತ್ತಲಿನ ಪ್ರದೇಶದ ದಲಿತರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಂಗಳವಾರ ಕೆಲವು ಕಿಡಿಗೇಡಿಗಳು ರಿಯಲ್ ಎಸ್ಟೇಟ್ ಮಾಡುವ ಸಲುವಾಗಿ ಹಾಗೂ  ಭೂ ಕಬಳಿಸಲು ರುದ್ರಭೂಮಿಯನ್ನು ತೆರವುಗೊಳಿಸಿ ಸಮತಟ್ಟು ಮಾಡಿದ್ದಾರೆ.         ಇದರ ಬಗ್ಗೆ  ತಹಸೀಲ್ದಾರ್ ಬಳಿ ದೂರನ್ನು ನೀಡಿದ್ದೇವೆ. ಅವರು ಇದರ ದಾಖಲಾತಿಗಳನ್ನು ಶೀಘ್ರವೇ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ರುದ್ರಭೂಮಿಯ ಪುನರ್ ನಿರ್ಮಾಣವಾಗುವವರೆಗೂ ಹಾಗೂ ಕಿಡಿಗೇಡಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.               ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಗೌಡ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Image
ಕೇಂದ್ರ ಸರ್ಕಾರದ  ವಿರುದ್ಧ ಕಾಂಗ್ರೆಸ್ ಪ್ರತಿಭಟನೆ    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ತನಿಖಾ ತಂಡಗಳನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದು  ಆರೋಪಿಸಿ  ರಾಜ್ಯ ಕಾಂಗ್ರೆಸ್ ನಾಯಕರು  ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.      ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.        ಮನೋಹರ್ ಮಾತನಾಡಿ, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ದಾಳಿ ಮಾಡಿಸಿ, ಸೇಡು ತೀರಿಸಿಕೊಳ್ಳುವ ಯತ್ನ ಮಾಡಿತ್ತಿದೆ. ಇಂದು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಸಿಬಿಐ ದಾಳಿಗೆ ಮುಂದಾಗಿರುವ  ವಿಷಯ ತಿಳಿದಿದೆ. ಇದರ ವಿರುದ್ಧ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಮ್ಮ ನಾಯಕರ ವಿರುದ್ಧ ಕೇಂದ್ರ ಸರ್ಕಾರಸೇಡಿನ ರಾಜಕಾರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.          ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ಮೋಡಿ ರಾಜರಾಜೇಶ್ವರಿ ನಗರ ದಲ್ಲಿ ನಡೆದಿಲ್ಲ. ಮುನಿರತ್ನ ಗೆದ್ದಿದ್ದಾರೆ. ಇವರ ಅರ್ಧದಷ್ಟು ಮತವನ್ನು ಕೂಡ ಬಿಜೆಪಿ, ಜೆಡಿಎಸ್ ಸೇರಿ ಪಡೆದಿಲ್ಲ. ಸಿದ್ದರಾಮಯ್ಯ ನವರಜನಪರ ಕಾರ್ಯಕ್ಕೆ ಮತದಾರರು ಇನ್ನೊಂದ

ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್ ಮೊದಲ ವಾರ್ಷಿಕೋತ್ಸವ

Image
ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವ           ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವು  ದೀಪ ಬೆಳಗುವ ಮೂಲಕ  ಪ್ರಾರಂಭಿಸಲಾಯಿತು.            ನಂತರ  ಮಾತನಾಡಿದ  ಅಸೋಸಿಯೇಷನ್  ಅಧ್ಯಕ್ಷರಾದ   ಶ್ರೀ ಜಯಂತ್ ಗಾಣಿಗ,   ನಮ್ಮ ಅಸೋಸಿಯೇಷನ್ ಒಂದು ವರ್ಷ ಪೂರ್ಣಗೊಂಡಿದೆ ಅದಕ್ಕೆ ನನಗೆ  ತುಂಬಾ ಸಂತೋಷವಾಗಿದೆ ಈ ಒಂದು ವರ್ಷದಲ್ಲಿ ಎಲ್ಲ ಜಿಲ್ಲೆಯ ಅಧ್ಯಕ್ಷರೊಡನೆ  ವಿತರಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ಮುಂಬರುವ ದಿನಗಳಲ್ಲಿ ತೊಂದರೆಗಳು ಸರಿಪಡಿಸಲು  ಹಾಗೂ ವಿತರಕರಿಗೆ ಸಿಗಬೇಕಾದ ಸೌಲತ್ತುಗಳನ್ನು  ಕೊಡಿಸಲು ಎಲ್ಲಾ ಜಿಲ್ಲೆಯ ಅಧ್ಯಕ್ಷರು ಒಟ್ಟುಗೂಡಿ ಓಡಾಡುತ್ತೇವೆ ಎಂದು ಹೇಳಿದರು.            ಈ ಸಂದರ್ಭದಲ್ಲಿ   ಧೈರ್ಯ ಶಾಲಾ ಪಾಟೀಲ್ , ಸುಭಾಷ್ ಮತ್ತು   ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ದೂರು ದಾಖಲು

Image
 ಬಿ.ಎಸ್‌. ಯಡಿಯೂರಪ್ಪ ವಿರುದ್ಧ  ದೂರು ದಾಖಲು         ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಕಳೆದ ಶನಿವಾರ ವಿಧಾನಸಭೆಯಲ್ಲಿ  ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ನ್ಯಾಯವಾದಿ ಜ್ಞಾನಪ್ರಕಾಶ್‌ ದೂರು ದಾಖಲಿಸಿದ್ದಾರೆ.          ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ವಿಧಾನಸಭೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದರೂ ಬಿಜೆಪಿ ಮುಖಂಡರಾದ ಯಡಿಯೂರಪ್ಪ  ವಿಧಾನಸಭೆಯ ಸದನದಿಂದ ಹೊರ ನಡೆದಿದ್ದರು ಎಂದು ನ್ಯಾಯವಾದಿ ಜ್ಞಾನಪ್ರಕಾಶ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಂಡಾನ್ಯಾಯಾಲಯ ದೂರು ಸ್ವೀಕರಿಸಿದ್ದು, ಮುಂದಿನ ವಿಚಾರಣೆ ಮೇ 29ಕ್ಕೆ ನಿಗದಿಪಡಿಸಲಾಗಿದೆ.