Posts

ಬೆಂಗಳೂರಿನ ಮೇಕೆದಾಟು ಪಾದಯಾತ್ರೆಯ ಯಶಸ್ಸಿನ ರೂವಾರಿ ರಾಮಲಿಂಗಾರೆಡ್ಡಿ

Image
ಬೆಂಗಳೂರಿನ ಮೇಕೆದಾಟು ಬೃಹತ್ ಸಮಾವೇಶ  ಸಮಾವೇಶ  ಯಶಸ್ಸಿಗೆ ಕಾರಣಕರ್ತ ರಾಮಲಿಂಗ ರೆಡ್ಡಿ   ರಾಮಲಿಂಗ ರೆಡ್ಡಿ ನೇತೃತ್ವದ ಮೇಕದಾಟು ಪಾದಯಾತ್ರೆ ಸಮಾರೋಪದ ಬೃಹತ್ ಸಮಾವೇಶ ಯಶಸ್ವಿ           ಮೇಕೆದಾಟು ಪಾದಯಾತ್ರೆ  ಬೆಂಗಳೂರಿನ  ಸಮಾರೋಪದ ಬೃಹತ್ ಸಮಾವೇಶದ  ಯಶಸ್ವಿಗೆ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕತ್ವವೇ ಕಾರಣ ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ನಮ್ಮ ನಾಯಕರಾದ  ರಾಮಲಿಂಗರೆಡ್ಡಿ ರವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಮೊಳಗಿದ ಘೋಷವಾಕ್ಯ     ಬೆಂಗಳೂರುನಗರ ಜನರ ಕುಡಿಯುವ ನೀರಿಗಾಗಿ ಮೇಕೆದಾಟುವಿನಿಂದ ಆರಂಭವಾದ ಪಾದಯಾತ್ರೆಯ  ಅಂತಿಮ ದಿನವಾದ ಇಂದು ಅರಮನೆ ಮೈದಾನದಿಂದ ಸಾಗಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾದಯಾತ್ರೆ ಮೂಲಕ ಸಾಗಿತ್ತು. ಈ ಪಾದಯಾತ್ರೆಗೆ ವಿವಿಧ ಭಾಗಗಳಿಂದ ಹರಿದು ಬಂದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ನಡುವೆ ಶಾಸಕರು, ಮಾಜಿ ಸಚಿವರು ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಂಗೊಳ್ಳಿ ರಾಯಣ್ಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಂಸಾಳೆ, ವೀರಗಾಸೆ, ಕೀಲು ಕುದುರೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕಾಂಗ್ರೆಸ್ ಬಾವುಟ, ಕನ್ನಡ ಬಾವುಟ ಕೈಯಲ್ಲಿ ಹಿಡಿದ ಕಾಂಗ್ರೆಸ್ ಕಾರ್ಯಕರ್ತರಿಂದ ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆಗಳನ್ನು

"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ

Image
"ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ"  ವಿಶ್ವ ರಕ್ತದಾನ ದಿನಾಚರಣೆ 2021 ಕಾರ್ಯಕ್ರಮ           ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಿಯಮಿತವಾಗಿ ರಕ್ತದಾನವನ್ನು ಮಾಡೋಣ ಹಾಗೂ ನಮ್ಮ  ಬಂಧು ಮಿತ್ರರಿಗೂ ರಕ್ತದಾನ ಮಾಡಲು ಪ್ರೇರೇಪಿಸಿ ರಕ್ತದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.        ಬೆಂಗಳೂರಿನ ವಿಜಯನಗರದ ಲಯನ್ಸ್ ರಕ್ತ ನಿಧಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಲಯನ್ಸ್ ರಕ್ತ ನಿಧಿ ಹಾಗೂ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ 2021 ಅಂಗವಾಗಿ "ರಕ್ತ ನೀಡಿ ಮತ್ತು ಜಗತ್ತನ್ನು ಗೆಲ್ಲಿಸಿ" ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು  ಜೂನ್ 14, ಎಬಿ ರಕ್ತ ವ್ಯವಸ್ಥೆಯನ್ನು ಕಂಡುಹಿಡಿದ ವಿಜ್ಞಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಕಾರ್ಲ್ ಲ್ಯಾಂಡ್‌ಸ್ಟೈನರ್‌ರವರ ಜನ್ಮದಿನದ ಅಂಗವಾಗಿ ವಿಶ್ವ ರಕ್ತದಾನ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ ರಕ್ತದಾನ ಜೀವದಾನ  ಕೊರೋನಾ ದಿಂದ ಸಾವು ನೋವುಗಳು ಹೆಚ್ಚುತ್ತಿರುವ ಇತ್ತೀಚಿನ ಸಂಕಷ್ಟದ ದಿನಗಳಲ್ಲಿ ನಮ್ಮ ಜೀವ ಮತ್ತು ಜೀವನದ ಬಗ್ಗೆ ಇರುವ ಮಹತ್ವವನ್ನು ಹೆಚ್ಚಾಗಿ

ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ

Image
ಕೊರೊನಾ ವೈರಸ್ ಬಗ್ಗೆ  ಜನರಲ್ಲಿ ಜಾಗೃತ ಮೂಡಿಸುವಂತೆ  ಕಾರ್ಯಕರ್ತರಿಗೆ ಕರೆ  ಕರುನಾಡ ಜನಸ್ಪಂದನ ವೇದಿಕೆಯ ಅಧ್ಯಕ್ಷ  ನಟರಾಜ್ ಬಿ.ಪಿ           ಕೊರೊನಾ ವೈರಸ್ ಬಗ್ಗೆ ಜನರು ಭಯಪಡುವ ಬದಲು ಮುಂಜಾಗ್ರತೆ ವಹಿಸಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕು ಕೊರೊನಾ ವೈರಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ  ಕರುನಾಡ ಜನಸ್ಪಂದನ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಟರಾಜ್ ಬಿ.ಪಿ ಕರೆ ನೀಡಿದರು.     ಭಾರತದಲ್ಲಿ ಕೋವಿಡ್-19 ಭಾರಿ ಹಾನಿಯನ್ನುಂಟು ಮಾಡುತ್ತಿದ್ದು ಈ ಪಿಡುಗಿನಿಂದ ಸಂಭವಿಸುತ್ತಿರುವ ಸಾವು-ನೋವಿನ ವರದಿಗಳು ಭಯಾನಕ ಹಾಗೂ ಹೃದಯ ಹಿಂಡುವಂತಿವೆ ಎಂದು ಕರುನಾಡ ಜನಸ್ಪಂದನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಟರಾಜ್ ಬಿ.ಪಿ ಆತಂಕ ವ್ಯಕ್ತಪಡಿಸಿದ್ದಾರೆ.       ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಕೊರೊನಾ ವೈರಸ್ ಆವರಿಸಿ ಜನರನ್ನು ಭಯಭೀತರನ್ನಾಗಿಸಿತ್ತು. ಇತ್ತೀಚೆಗೆ ಲಸಿಕೆ ಬಂದ ನಂತರ ಜನರು ಭಯದಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿತ್ತು ಆದರೆ ಈಗ ಕೊರೊನಾ ವೈರಸ್ ಎರಡನೇ ಅಲೆ ಸಾಗರೋಪಾದಿಯಲ್ಲಿ ಹರಡುವ ಮೂಲಕ ಮತ್ತೆ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ಕಂಡು ಬರುತ್ತಿದೆ.  ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಗೆ ಕರೆ ನೀಡಿದೆ,  ಕೊರಾನಾ ಎರಡನೇ ಅಲೆ ರಾ

jayakarnataka janapara vedike

Image
  ಜಯ ಕರ್ನಾಟಕ ಜನಪರ  ವೇದಿಕೆಯಿಂದ  ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಪ್ರತಿಭಟನೆ.           ಬೆಂಗಳೂರು: ಟೋಲ್ ಗಳಲ್ಲಿ ಫಾಸ್ಟಾಗ್ ಕಡ್ಡಾಯ ವಿರೋಧಿಸಿ ಹಾಗೂ ಸರ್ವಿಸ್ ರಸ್ತೆಗಳನ್ನು ಬಿಡದೆ  ಟೋಲ್ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ 8ನೇ ಮೈಲಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.              ವಾಹನ  ಸವಾರರಿಂದ ಟೋಲ್ ಸುಂಕವನ್ನು ಪಡೆದು ಸರ್ವಿಸ್ ರಸ್ತೆಗಳಿಲ್ಲ  ಹಾಗೂ ಉತ್ತಮ ಗುಣಮಟ್ಟದ ನಿರ್ವಹಣೆ ಇಲ್ಲ. ಕೂಡಲೇ ರಾಜ್ಯದ ಎಲ್ಲಾ ಟೋಲ್ ಕಂಪನಿಗಳು ಸರ್ವಿಸ್ ರಸ್ತೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ  ಆಗ್ರಹಿಸಿದರು.          ಭಾರತದ ಸರ್ವೋಚ್ಚ ನ್ಯಾಯಾಲಯ ನಡೆದಾಡುವ ಸ್ವತಂತ್ರ ಹಕ್ಕನ್ನು ಸಂವಿಧಾನ ರೀತಿಯಲ್ಲಿ ನೀಡಿರುತ್ತದೆ. ಅಲ್ಲದೆ ಭಾರತದಲ್ಲಿ ಖರೀದಿಮಾಡುವ ಪ್ರತಿ ವಾಹನಕ್ಕು ಜೀವಮಾನದ ರಸ್ತೆ ತೆರಿಗೆ ( ಲೈಫ್ ಟೈಮ್ ರೋಡ್ ಟ್ಯಾಕ್ಸ್) ಪಡೆದುಕೊಂಡ ನಂತರವಷ್ಟೇ ಪ್ರಾದೇಶಿಕ ಸಾರಿಗೆಯ ಅಧಿಕಾರಿಗಳು ವಾಹನಗಳನ್ನು ನಮೂದಿಸಿಕೊಂಡು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಜೀವಮಾನದ ರಸ್ತೆ ತೆರಿಗೆಯಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಿಕೊಡಲು ನಿಗದಿ ಆಗಿರುತ್ತದೆ. ಆದರೂ ಕೂಡ ದುರಾದೃಷ್ಟಕರ ವಿಚಾರವೇನೆಂದರೆ ಇಡೀ ಭಾರತದ ತುಂಬಾ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ

ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ಸನ್ಮಾನ ಸಮಾರಂಭ

Image
ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ  ವತಿಯಿಂದ ಸನ್ಮಾನ ಸಮಾರಂಭ    ಕುಂಭಾರ ಯುವ ಸೈನ್ಯ ಹಾಗೂ ಕುಂಭಾರ ಸಮಾಜ ವತಿಯಿಂದ ನೂತನವಾಗಿ ಆಯ್ಜೆಗೊಂಡಿರುವ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸನ್ಮಾನ ಸಮಾರಂಭವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.  ಸನ್ಮಾನ ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ್, ನೂತನವಾಗಿ ಆಯ್ಕೆಗೊಂಡಿರುವ  ಸದಸ್ಯರು ಎಲ್ಲ. ಸಮಾಜದ ಕಾರ್ಯ ಗಳನ್ನು ಮಾಡುವಂತಾಗಬೇಕು ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ, ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ನೀಡುವ ನಿಯಮವಿದ್ದು, ಆ ನಿಟ್ಟಿನಲ್ಲಿ ನೀವು ಆಯ್ಕೆಯಾಗಿದೀರಾ ಎಂದರು. ಕುಂಭಾರ ಜನಾಂಗಕ್ಕೆ ಪ್ರತ್ಯೇಕ ನಿಗಮದ ಅವಶ್ಯ ಕತೆ ಇದೆ ಇದು ನನ್ನ ವೈಯಕ್ತಿಕ ನಿಲುವಾಗಿದೆ. ಅವರ ಹಿತಾಸಕ್ತಿಗಳ ಈಡೇರಿಕೆಗೆ ಚಿಕ್ಕ ಜನಾಂಗಗಳಿಗೆ ನಿಗಮದ ಅವಶ್ಯಕತೆ ಇದೆ. ನಿಗಮ ರಚನೆ ವಿಚಾರದಲ್ಕಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಶಾಲಾ ನೊಂದಣಿ ವಿಚಾರದಲ್ಲಿ ಜಾತಿ ನಮೂನೆಯನ್ನು ಅಳವಡಿಸುವ ವಿಚಾರದಲ್ಕಿ ಎಚ್ಚರಿಕೆ ವಹಿಸಬೇಕು. ಮುಂದೆ ಇದು ಅನುಕೂಲವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಯುವ ಸೈನ್ಯ ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ ಮತ್ತಿತರರು ಹಾಜರಿದ್ದರು.

ಅಲೈಯನ್ಸ್ ವಿವಿ ಪ್ರಕರಣ ಸೂಕ್ತ ತನಿಖೆಯಾಗಲಿ ಮಧುಕರ್ ಜಿ ಅಂಗೂರ್

Image
  ಅಲೈಯನ್ಸ್ ವಿವಿ ನಕಲಿ ಸಹಿ ಬಳಸಿ ಬಹುಕೋಟಿ ಹಗರಣ ಪ್ರಕರಣ ಸೂಕ್ತ ತನಿಖೆಯಾಗಲಿ:   ಸಂಸ್ಥಾಪಕ ಮಧುಕರ್ ಜಿ. ಆಂಗೂರ್           ಪ್ರಪಂಚದಲ್ಲಿ ಕರೋನ ಆರ್ಭಟ ಇಳಿಮುಖಗೊಳ್ಳುತ್ತಿದ್ದಂತೆ, ಜನರನ್ನು ನಾನಾ ಬಗೆಯ ಹಗರಣಗಳ ಸುದ್ಧಿಗಳು ಆಕರ್ಷಿಸುತ್ತಿವೆ. ಅಂತಹ ಸುದ್ಧಿಗಳ ನಡುವೆ ಜನರನ್ನು ಹುಬ್ಬೆರಿಸುವಂತೆ ಮಾಡಿರುವ ಸುದ್ಧಿಗಳಲ್ಲಿ ಬೆಂಗಳೂರಿನಲ್ಲಿನ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ವಂಚನೆಯ ಹಗರಣವು ಪ್ರಮುಖ ಸುದ್ಧಿ ಆಗಿ ಗಮನ ಸೆಳೆದಿದೆ.        ಬೆಂಗಳೂರಿನ “ಅಲೈಯನ್ಸ್ ಯೂನಿವರ್ಸಿಟಿ”ಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವು ರಾಜ್ಯ ಮಟ್ಟದಲ್ಲೇ, ಅಲ್ಲದೇ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಸಂಬಂಧವಾಗಿ ನಮ್ಮ ವಾಹಿನಿಯ ಸಂದರ್ಶನದ ವೇಳೆ ನಮ್ಮ ಸುದ್ಧಿಗಾರರೊಂದಿಗೆ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಆಜೀವ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಧುಕರ್ ಜಿ. ಆಂಗೂರ್ ಮಾತನಾಡಿ ನಾನು ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಅಲ್ಲಿ ದುಡಿದ ಹಣವನ್ನು ಸದುಪಯೋಗಪಡಿಸುವ ಉದ್ದೇಶದಿಂದ, ಇಲ್ಲಿ ನಮ್ಮ ಭಾರತದಲ್ಲಿ ವಿದ್ಯಾ ರಂಗದ ಮುಖಾಂತರ ಸೇವೆಯನ್ನು ಮಾಡುವ ಕನಸಿನ ಫಲವಾಗಿ, ಇದೇ ನಮ್ಮ ಬೆಂಗಳೂರಿನಲ್ಲಿ “ಅಲೈಯನ್ಸ್ ಯೂನಿವರ್ಸಿಟಿ”ಯ ಜನನವಾಯಿತು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video        ಅನಿವಾಸಿ ಭಾರತೀಯನಾಗಿರುವ ನನಗೆ ಈ ಕೆಲಸ

ಭಾರತ್ ಬಂದ್ ಗೆ ದಲಿತ ಯುವಕರ ಸೇವಾ ದಳದ ಬೆಂಬಲ : ಎಸ್. ವೆಂಕಟೇಶ್

Image
  ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳದ ಬೆಂಬಲ : ಎಸ್.ವೆಂಕಟೇಶ್          ಬೆಂಗಳೂರು : ಕೇಂದ್ರದ ನೂತನ ಕೃಷಿ ಮಸೂದೆ ವಿರೋಧಿಸಿ ಡಿ.8ರಂದು ಕರೆ ನೀಡಿರುವ ಭಾರತ ಬಂದ್‌ಗೆ ದಲಿತ ಯುವಕರ ಸೇವಾದಳ ಬೆಂಬಲ ಸೂಚಿಸಿದೆ.      ದಲಿತ ಯುವಕರ ಸೇವಾದಳದ ಅಧ್ಯಕ್ಷ ಎಸ್. ವೆಂಕಟೇಶ್ ಮಾತನಾಡಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಭಾರತ ಬಂದ್‌ನಲ್ಲಿ ನಾವು ಕೂಡ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು. ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್ ಮಾಡಿ  Click here to watch this video       ದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದಲಿತ ಯುವಕರ ಸೇವಾ ದಳದ ಬೆಂಬಲವಿದೆ, ಬೇರೆ ಬೇರೆ ಜಿಲ್ಲೆಗಳಿಂದ ರೈತರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ನಾವು ಕೂಡ ಎಪಿಎಂಸಿ ಬಿಲ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳಿಂದ ರೈತರ ಕಲ್ಯಾಣವಾಗುವುದಿಲ್ಲ ಎಂದರು.        ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ, ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ. ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿ