Posts

ಹೇರ್ ಲೈನ್ ಇಂಟರ್ ನ್ಯಾಷನಲ್

Image
ಹೇರ್ ಲೈನ್ ಇಂಟರ್ ನ್ಯಾಷನಲ್       ಬೆಂಗಳೂರು: 28 ಆಗಸ್ಟ್, 2018: ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಇಂದು ಕರ್ನಾಟಕ ಸಲೂನ್ ಹಾಗು ವೆಲ್ನೆಸ್ ಸೆಂಟರ್ ಓನರ್ಸ್ ಎಸೋಸಿಯೇಶನ್ (ಕೆಎಸ್ಡಬ್ಲ್ಯುಒಎ) ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಘೋಷಿಸಿಕೊಂಡಿದೆ. ಈ ಸಂಬಂಧದಿಂದ ಹೇರ್ಲೈನ್ ಇಂಟರ್ನ್ಯಾಷನಲ್ ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಸಲೂನ್ಗಳಲ್ಲಿ ಟ್ರೈಕಾಲಜಿ ಮತ್ತು ಡರ್ಮಟಾಲಜಿಯ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಸಹಾಯಕೇಂದ್ರಗಳು ಗ್ರಾಹಕರ ಟ್ರೈಕಾಲಜಿ ಹಾಗು ಡರ್ಮಟಾಲಜಿ ಸಮಸ್ಯೆಗಳಿಗೆ ಸಂಬಂಧಿಸಿ ಜವಾಬ್ದಾರಿಯುತ ಸೇವೆ ಸಲ್ಲಿಸುತ್ತವೆ. ಕೂದಲು ಉದುರುವಿಕೆ ಮತ್ತು ಡರ್ಮಟಾಲಜಿಯ ಈ ಸಹಾಯಕೇಂದ್ರವನ್ನು ಮುಖ್ಯ ಅತಿಥಿಗಳಾದ ಶಾಸ್ತ್ರೀಯ ನೃತ್ಯ ಪಟು ವಾಣಿ ಗಣಪತಿ ಹಾಗೂ ಪಂಚಾಯತ್ ರಾಜ್ ನ ಕಾರ್ಯದರ್ಶಿ, ಮಾಜಿ ಆರೋಗ್ಯ ಕಮಿಷನರ್ ಎಂ.ವಿ.ಸಾವಿತ್ರಿ ಅನಾವರಣಗೊಳಿಸಿದರು.        ಆ ಬಳಿಕ ಮಾತನಾಡಿದ ವಾಣಿ ಗಣಪತಿ, "ದಿನನಿತ್ಯದ ಬದುಕಿನ ಜಂಜಡಗಳ ಮಧ್ಯೆಯೇ ವಿಶೇಷ ಆರೈಕೆಯ ಬಗ್ಗೆ ಸಾಮಾನ್ಯರಿಗೂ ತಿಳುವಳಿಕೆ ಲಭ್ಯವಾಗುವಂತೆ ಮಾಡಲು ಇದು ಅತ್ಯುತ್ಯಮ ಮಾರ್ಗವಾಗಿದೆ. ಇದು ಗ್ರಾಹಕರ ಮತ್ತು ಸಂಸ್ಥೆಯ ಮಧ್ಯೆ ಉತ್ತಮ ಬಾಂಧವ್ಯವನ್ನು ಏರ್ಪಡಿಸುತ್ತದೆ. ಟ್ರೈಕಾಲಜಿ ಮತ್ತು ತ್ವಚೆ ಆರೈಕೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ಸಂಸ್ಥೆ ಸಲೂನ್ಗಳಿಗೂ ವಿಶ...
Image
ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಪ್ಲಾಸ್ಟಿಕ್ ಬಳಕೆಯನ್ನು ರಾಜ್ಯ ಸರ್ಕಾರವು 2016ರ ಮಾರ್ಚ್ 11ರಿಂದ ನಿಷೇಧಿಸಿದ್ದರು ಸಹ  ನಗರದಲ್ಲಿ ಕಂಡುಕಾಣದಂತೆ ಪ್ಲಾಸ್ಟಿಕ್ ಉಪಯೋಗವಾಗುತ್ತಿದೆ. ಇದರಿಂದಾಗಿ ನಗರದಲ್ಲಿ 300-400 ಟನ್ ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತಿದ್ದು, ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಜಯನಗರವನ್ನು ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಪಣತೊಟ್ಟಿರುವ ಶಾಸಕಿ ಸೌಮ್ಯಾರೆಡ್ಡಿರವರು  ಪ್ಲಾಸ್ಟಿಕ್ ಮತ್ತು ಕಸಮುಕ್ತ ಜಯನಗರ ಜಾಗೃತಿ ಆಭಿಯಾನವನ್ನು ಆಯೋಜಿಸಿದರು. ಅಭಿಯಾನಕ್ಕೆ ನೂರಾರು ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಆಗಮಿಸಿದ್ದರು.

ಅದ್ದೂರಿ ಸ್ವಾತಂತ್ರ್ಯೋತ್ಸವ

Image
ಬೆಂಗಳೂರಿನ ಸೇಂಟ್ ಮಾರ್ಕ್ಸ್ ಇಂಗ್ಲೀಷ್ ಶಾಲೆಯಲ್ಲಿ  ಅದ್ದೂರಿ ಸ್ವಾತಂತ್ರ್ಯೋತ್ಸವ..      ಸೇಂಟ್ ಮಾರ್ಕ್ಸ್ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ನ  ಉಪಾಧ್ಯಕ್ಷರಾದ  ತಿಮ್ಮರಾಜು ಅವರು ನೆರವೇರಿಸಿದರು. ಸಮಾರಂಭದಲ್ಲಿ  ಶಾಲೆಯು ಅಧ್ಯಕ್ಷರಾದ ಶ್ರೀರಂಗಮ್ಮ, ನಿವೃತ್ತ ಪ್ರಾಂಶುಪಾಲರಾದ ಶಾರದಮ್ಮ, ಶಾಲಾ ಆಡಳಿತದ ಪ್ರದೀಪ್ ಕುಮಾರ್ ಡಿ.ಸಿ ಹಾಗೂ ಚೈತ್ರ ಕೆ.ಪಿ ಹಾಗೂ ಓಂ ಪ್ರಕಾಶ್ ಅವರು ಉಪಸ್ಥಿತಾಗಿದ್ದರು.             ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತಿಮ್ಮರಾಜು ಅವರು ಮಾತನಾಡಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪೋಷಕರು ಮಾಡಬೇಕು, ಮಕ್ಕಳ ಆಸಕ್ತಿ ಅನುಗುಣವಾಗಿ ಬೆಳೆಯಲು ಪ್ರೇರೆಪಣೆ ನೀಡಬೇಕು. ಇಂದಿನ ಮಕ್ಕಳು ಉತ್ತಮ ಕೌಶಲ್ಯವನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಜೀವಿಸಬೇಕು. ಏನಾದರೂ ಗುರಿಮಟ್ಟಲು, ಅವರ ಆಶಾಭಾವನೆ ಕೆದಿಕಿ  ನಾವು ಮಾರ್ಗದರ್ಶ ನೀಡಬೇಕು. ಪೋಷಕರು ಅವರಲ್ಲಿನ ಆಸಕ್ತಿ ತುಂಬಿ ಅವರ ಏಳಿಗೆಗೆ ಶ್ರಮಿಸಬೇಕು ಎಂದು ಮಕ್ಕಳಿಗೆ ಉಪಯುಕ್ತ  ಮಾಹಿತಿ ನೀಡಿದರು.    ಮಕ್ಕಳನ್ನು ಹೆಚ್ಚು ಅಂಕಗಳನ್ನು ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಅವರಲ್ಲಿನ ಪ್ರತಿಭೆಯ ಆಧಾರದ ಮೇಲೆ ಅವರಿಗೆ ಸ್ಪ...

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ದ ನೌಕರರ ಧರಣಿ ಸತ್ಯಾಗ್ರಹ

Image
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ  ವಿರುದ್ದ ನೌಕರರ ಧರಣಿ ಸತ್ಯಾಗ್ರಹ     ಬೆಂಗಳೂರು, ಜುಲೈ 09, 2018: ತಮಿಳುನಾಡು ಮೂಲಕ ಆಡಳಿತ ಮಂಡಳಿಯ ಅಧೀನದಲ್ಲಿರುವ  ಬೆಂಗಳೂರಿನ ಕೆಂಗೇರಿ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ  ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಇಂದು ನೂರಕ್ಕೂ  ಹೆಚ್ಚು ಸಿಬ್ಬಂದಿಗಳು ಧರಣಿ ಸತ್ಯಾಗ್ರಹವನ್ನು ನಡೆಸಿದರು.        ನಗರದ ಮೌರ್ಯ ವೃತ್ತದ ಬಳಿ ಇರುವ ಗಾಂದಿ  ಪ್ರತಿಮೆಯ ಬಳಿ ನಡೆದ ಪ್ರತಿಭಟನೆಯ ನೇತೃತ್ವವನ್ನು  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ ವೆಂಟಕಸ್ವಾಮಿ, ಆರ್ ಆರ್ ಎಂ ಸಿ ಹೆಚ್  ಯೂನಿಯನ್ ಗೌರವ ಅಧ್ಯಕ್ಷರಾದ ಡಾ. ಸಿ ಎಸ್ ರಘು ವಹಿಸಿದ್ದರು.      ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ  ವೆಂಟಕಸ್ವಾಮಿ ಮಾತನಾಡಿ, 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಮೇಲೆ ಆಡಳಿತ ಮಂಡಳಿ  ಮೊದಲಿನಿಂದಲೂ ಕೂಡಾ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಕಾಲ ಸೇವೆ  ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಕಟ್ಟಿದ್ದೇ ತಪ್ಪಾಗಿದೆ,  ಸಂಘದ ಮ...

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಪ್ಪಂದ

Image
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಪ್ಪಂದ           ತುಮಕೂರಿನ ವಸಂತ ನರಸಾಪುರದಲ್ಲಿ ರಾಜ್ಯದಲ್ಲೇ ದೊಡ್ಡ ಕೈಗಾರಿಕಾ ಹಬ್  ಒಪ್ಪಂದ   ಸಜ್ಜಾಗಿದೆ.  ಹಲವು ದಿನಗಳಿಂದ ಈ ಭಾಗದ ಕೈಗಾರಿಕಾ ಹಬ್ ಇದೀಗ ಟೇಕಾಫ್ ಆಗಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೆನ್ನೈ-ಬೆಂಗಳೂರು        ಕೈಗಾರಿಕಾ ಕಾರಿಡಾರ್ನ ಭಾಗವಾದ ತುಮಕೂರು ಕೈಗಾರಿಕಾ   ನಿರ್ಮಾಣ ಕೆಲಸಕ್ಕೆ ಮುನ್ನುಡಿ ಬರೆದಂತಾಗಿದೆ.        ರಾಜ್ಯ ಸರಕಾರ ಶೇರ್‌ಹೋಲ್ಡರ್ಸ್, ಅಗ್ರಿಮೆಂಟ್ (ಎಸ್‌ಎಚ್‌ಎ) ಹಾಗೂ ಸ್ಟೇಟ್‌ ಸಪೋರ್ಟ್‌ ಅಗ್ರಿಮೆಂಟ್ (ಎಸ್‌ಎಸ್‌ಎ) ಮಾಡಿಕೊಳ್ಳುವ ಮೂಲಕ ಕೆಲಸಕ್ಕೆ ಚಾಲನೆ ಸಿಕ್ಕಿದ್ದು. ಕೇಂದ್ರ ಸರಕಾರದ ಐದು ವಿಶೇಷ ವಾಣಿಜ್ಯ ಹಾಗೂ ಕೈಗಾರಿಕಾ ಕಾರಿಡಾರ್‌ನ ಪೈಕಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಕೂಡ ಒಂದು. ಉತ್ಪಾದನಾ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಜತೆಗೆ ಉದ್ಯೋಗ ಸೃಷ್ಟಿಸಲು ಈ ಕಾರಿಡಾರ್ ನಿರ್ಮಾಣ ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ.     ಸಿಬಿಐಸಿ ಕಾರಿಡಾರ್ ಬೆಂಗಳೂರು ಹಾಗೂ ಚೆನ್ನೈ ಸಿಟಿಗಳನ್ನು ಲಿಂಕ್ ಮಾಡಲಿದ್ದು, 560 ಕಿ....

ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ

Image
ಸಾವಯವ ಮೇಳದಿಂದ ರೈತರಿಗೆ ಲಾಭ: ರಾಮಲಿಂಗಾ ರೆಡ್ಡಿ       ಬೆಂಗಳೂರು: ರಾಜಧಾನಿಯಲ್ಲಿ ಸಾವಯವ ಮೇಳ ಆಯೋಜಿಸಿರುವುದು  ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಇದರ ಬಗ್ಗೆ ಅರಿವು ಉಂಟಾಗಲು ಸಹಾಯಕವಾಗಲಿದೆ. ಈ ಮೇಳ ಆಯೋಜಿಸಿರುವ ಐಸಿಸಿಒಎಯ ಒಂದು ಉತ್ತಮ ಉಪಕ್ರಮ ಇದಾಗಿದೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಶ್ಲಾಘನೆ    ವ್ಯಕ್ತಪಡಿಸಿದರು.          ಇಂಟರ್‌ನ್ಯಾಾಷನಲ್ ಕಂಪಟೆನ್‌ಸ್‌ ಸೆಂಟರ್ ಫಾರ್ ಆರ್ಗ್ಯಾನಿಕ್  ಅಗ್ರಕಲ್ಚರ್ ಹಾಗೂ ಬಿಬಿಎಂಪಿ ಸಹಯೋಗದಲ್ಲಿ  ಕೋರಮಂಗಲದಲ್ಲಿ ನಿನ್ನೆ  ಮತ್ತು ಇಂದು ನಡೆಯುತ್ತಿರುವ ಸಾವಯವ ಕೃಷಿ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಂತಹ ಸಾವಯವ ಆಹಾರ ಪದಾರ್ಥಗಳ ಮೇಳ ಆಯೋಜಿಸಿರುವುದರಿಂದ ರೈತರಿಗೆ ಲಾಭವಾಗಲಿದೆ. ಜೊತೆಗೆ ದೇಶಾದ್ಯಂತ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುವುದರಿಂದ  ಹೆಚ್ಚಿನ ಲಾಭ  ರೈತರಿಗೆ ದೊರೆಯಲಿದೆ ಎಂದು ಹೇಳಿದರು.          ಕರ್ನಾಟಕ ಸಾವಯವ ಆಹಾರ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹೀಗಾಗಿ ಸಾವಯವ ಆಹಾರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಸಾವಯವ ಬೆಳೆ ಬೆಳೆಯುವ ರೈತರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸಾವಯವ ಪದಾರ್ಥಗಳನ್ನು ಜನರಿಗೆ ಪರಿಚಯಿಸಲು ಈ ಮೇಳ ಆಯೋಜಿಸಿದ್ದು, ನಗರಾದ್ಯಂತ ಜನರು ಆಗಮಿಸಿ ಈ ಮೇಳ ಯಶಸ್ವಿಗೊಳಿಸಬ...

ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ

Image
 ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆ       ಬಿ.ಎಸ್. ಪಾಟೀಲ್ ರವರ  ತಂಡ ಸರಕಾರಕ್ಕೆ  ಸಲ್ಲಿಸಿರುವ  ಬೆಂಗಳೂರು ವಿಭಜನೆಯ ವರದಿಯನ್ನು ಬಿ.ಜೆ.ಪಿ ವಿರೋದಿಸುತ್ತದೆ. ಎಂದು ಬಿ.ಬಿ.ಎಂ.ಪಿಯ ವಿರೋದ ಪಕ್ಷದ ನಾಯಕ  ಪದ್ಮನಾಭರೆಡ್ಡಿ   ತಿಳಿಸಿದರು. ಇಂದು ಬಿ.ಬಿ.ಎಂ.ಪಿ. ಮಾಸಿಕ ವಿಷಯ ಸಭೆಯಲ್ಲಿ  ಬಿ.ಎಸ್. ಪಾಟೀಲ್  ವರದಿಯ ಮೇಲೆ  ಮಾತನಾಡತ್ತ. ಯಾವುದೇ  ಕಾರಣಕ್ಕೆ  ಬೆಂಗಳೂರು ನಗರವನ್ನು ವಿಭಜನೆ ಮಾಡಲು ಬಿಡುವುದಿಲ್ಲವೆಂದು ಸಭೆಗೆ ತಿಳಿಸಿದರು. ಪಾಟೀಲ್ ರವರ ವರದಿ ಯಲ್ಲಿರುವ ಲೋಪದೋಷಗಳನ್ನು ಎತ್ತಿಹಿಡಿದು. ಪಾಲಿಕೆ ಸದಸ್ಯರ ಹಕ್ಕಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ  ಬಿ.ಎಸ್ ಪಾಟೀಲ್ ವರದಿಯನ್ನು  ಒಟ್ಟಾಗಿ  ತಿರಸ್ಕರಿಸಬೇಕು ಎಂದು ತಿಳಿಸಿದರು. ಬಿ.ಬಿ.ಎಂ.ಪಿ ಯ 198 ಸದಸ್ಯರ   ಅಭಿಪ್ರಾಯ  ಪಡೆದುಕೊಳ್ಳದೆ ವರದಿ ನೀಡಲಾಗಿದೆ  ಎಂದು ಅಸಮಾದಾನ ವ್ಯಕ್ತಪಡಿಸಿದರು.        ಪದ್ಮನಾಭರೆಡ್ಡಿ ಯವರ ಮಾತಿಗೆ  ಜೆ.ಡಿ.ಎಸ್. ನಾಯಕಿ ನೇತ್ರಾನಾರಯಣ ದ್ವನಿಗೊಡಿಸಿದರು. ಬೆಂಗಳೂರು ನಗರದಲ್ಲಿ ಆನ್ ಲೈನ್  ಖಾತೆ ಯನ್ನ ಬೆಂಗಳೂರು ಒನ್ ರಲ್ಲಿ ಮಾತ್ರ ಮಾಡಲಾಗುತ್ತಿದೆ. ಅದನ್ನು ಎಲ್ಲೆಡೆ ವಿಸ್ರರಿಸಬೇಕೆಂದು ಒತ್ತಾಯಮಾಡಿದರು.     ನಂತರ ...