ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್.

ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್. ರೋಬಟಿಕ್ ಮಲ್ಟಿಪರ್ಪಸ್ ಏಕ್ಸವೇಟರ್ ಎಂಬ ಹೂಳು ಎತ್ತುವ ಯಂತ್ರ ಖರೀದಿ ಕ್ಯೂಟಂತರ ರೂಪಾಯಿ ಅವ್ಯವಹಾರ ವಾಗಿದೆ ,ಇದರಲ್ಲಿ ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ರವರು ನೇರ ಹೊಣೆ ಎಂದು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ರವರು ಪತ್ರಿಕಾಗೋಷ್ಟಿಯಲಿ ಹೇಳಿದರು .ಒಂದು ಹೂಳು ಎತ್ತುವ ಯಂತ್ರದ ಬೆಲೆ ಹಾಗೂ ಒಂದು ವರ್ಷದ ನಿರ್ವಹಣೆಗೆ ಏಳು ಕೋಟಿ ಐವತ್ತು ಐದು ಲಕ್ಷ ರೂಪಾಯಿ ,ಮೂರು ಯಂತ್ರದ ಬೆಲೆ 22ಕೋಟಿಗಿಂತಲು ಹೆಚ್ಚು.ಈ ಯಂತ್ರಕ್ಕಿಂತ ವಿದೇಶ ಸ್ವಿಜರ್ಲೆಂಡ್ ಕಂಪನಿ ಹೂಳು ಎತ್ತುವ ಯಂತ್ರದ ಬೆಲೆ ಒಂದು ಕೋಟಿ ಮೂವತ್ತು ಲಕ್ಷ ಅದರೆ ಇದನ್ನು ಖರೀದಿ ಮಾಡಿದರೆ ತಮಗೆ ಲಾಭಂಶ ಬರುವುದಿಲ್ಲ ಎಂದು ,17ಕೋಟಿ ಗಿಂತ ಹೆಚ್ಚು ಹಣ ನೀಡಿ ಮೂರು ಯಂತ್ರಗಳನ್ನು ಖರೀದಿಸಲಾಗಿದೆ .ಸಾರ್ವಜನಿಕರ ತೆರಿಗೆ ಹಣ ಸಚಿವ ಕೆ.ಜೆ.ಜಾರ್ಜ್ ರವರ ಪಾಲಾಗಿದೆ ಎಂದು ಹೇಳಿದರು